Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಯೋಗ ಬರೇ ವ್ಯಾಯಾಮವಲ್ಲ, ಇದು ಹೊಸ ಯುಗಕ್ಕೆ ನಾಂದಿ: ಪ್ರಧಾನಿ ಮೋದಿ

ನವದೆಹಲಿ: ಯೋಗ ಕೇವಲ ವ್ಯಾಯಾಮವಲ್ಲ. ಮನುಷ್ಯ ಉದ್ವೇಗ ರಹಿತ ಜೀವನ ತೊರೆದು ಶಾಂತಿ ಜೀವನ ನಡೆಸಲು ಯೋಗ ಮುಖ್ಯ. ನಾವು ನಮ್ಮ ದೇಹವನ್ನು ಎಷ್ಟು ದಂಡಿಸುತ್ತೇವೆ ಎಂಬುದು ಯೋಗವಲ್ಲ. ಅದೇ ರೀತಿ ಯೋಗ ಸಾಧನೆಯಲ್ಲಿ ಆಸನಗಳು ಮುಖ್ಯ. ಈ ಯೋಗ ದಿನ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವ್ಯಕ್ತಪಡಿಸಿದರು.modi_nam

ಭಾನುವಾರ ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಮಾತನಾಡಿದ ಅವರು, ಯೋಗ ದಿನಕ್ಕೆ ಒಪ್ಪಿಗೆ ಸೂಚಿಸಿದ ವಿಶ್ವಸಂಸ್ಥೆಗೆ ಹಾಗೂ ಯೋಗದಲ್ಲಿ ಪಾಲ್ಗೊಂಡ 177 ದೇಶಗಳಿಗೆ ಆಭಾರಿಯಾಗಿದ್ದೇನೆ. ಇಂದು ಸೂರ್ಯನ ಎಲ್ಲ ಕಿರಣಗಳು ಯೋಗಾಭ್ಯಾಸಿಗಳಿಗೆ ಆಶೀರ್ವಾದ ನೀಡಿವೆ ಎಂದರು.


ಯೋಗದಿನ ಕೇವಲ ಮತ್ತು ಕೇವಲ ಮಾನವ ಕಲ್ಯಾಣಕ್ಕೆ ಮಾತ್ರ. ಪ್ರೇಮ ಶಾಂತಿ ಸೌಹಾರ್ದದ ಕಾರ್ಯಕ್ರಮವಾಗಿದೆ. ಬಹುಶ ರಾಜ್ ಪಥ್ ಕೂಡಾ ಯೋಗಪಥ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು.


ನಾವು ನಮ್ಮ ದೇಹವನ್ನು ಎಷ್ಟು ದಂಡಿಸುತ್ತೇವೆ ಎಂಬುದು ಯೋಗವಲ್ಲ. ಹಾಗಾಗಿದ್ದರೆ ಸರ್ಕಸ್ ನಲ್ಲಿದ್ದವರು ಕೂಡಾ ಯೋಗಿಗಳಾಗುತ್ತಿದ್ದರು. ಸಂಗೀತಕ್ಕೆ ಸ್ವರಗಳು ಹೇಗೋ, ಹಾಗೆ ಯೋಗಕ್ಕೂ ಆಸನಗಳು ಮುಖ್ಯ ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.IMG_

Modinos

 

 

No Comments

Leave A Comment