Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಯೋಗ ದಿನ: ರಾಜ್‌ಪಥ್‌ ಮೇಲೆ ಹಾರುವ ವಸ್ತುಗಳಿಂದ ದಾಳಿ, ಐಬಿ ಎಚ್ಚರಿಕೆ

yogadayನವದೆಹಲಿ: ದೆಹಲಿಯ ರಾಜ್‌ಪಥ್‌ ನಲ್ಲಿ ನಾಳೆ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರು ವಾಯುದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ರಾಜ್ ಪಥ್ ಮೇಲೆ ಬಲೂನ್‌, ಗಾಳಿಪಟ ಮುಂತಾದ ಹಾರುವ ವಸ್ತುಗಳ ಮೂಲಕ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ರಕ್ಷಣಾ ಅಧಿಕಾರಿಗಳಿಗೆ ಎಚ್ಚರಿಸಿದೆ.

ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆ ಕಾರ್ಯಕ್ರಮದ ವೇಳೆ ಗಾಳಿಪಟ, ಬಲೂನ್‌, ಗ್ಲೈಡರ್‌, ಮೈಕ್ರೊಲೈಟ್‌ ಮುಂತಾದ ಯಾವುದೇ ವಸ್ತುಗಳ ಹಾರಾಟವನ್ನು ದೆಹಲಿ ಪೊಲೀಸರು ನಿಷೇಧಿಸಿದ್ದಾರೆ. ಇದಲ್ಲದೇ, ಮೇಲಿಂದ ಚಿತ್ರಗಳನ್ನು ತೆಗೆಯಲು ಡ್ರೋನ್‌ ಕ್ಯಾಮರಾಗಳನ್ನು ಬಳಸದಂತೆ ಸೂಚಿಸಲಾಗಿದೆ.

ಯೋಗಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದರು, ರಾಜತಾಂತ್ರಿಕರು, ಅಧಿಕಾರಿಗಳು, ಸಾರ್ವಜನಿಕರು ಸೇರಿ 40,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು. ಭದ್ರತೆಗಾಗಿ ದೆಹಲಿ ಪೊಲೀಸರು ಸೇರಿ ಸಶಸ್ತ್ರ ಪಡೆಯ 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

No Comments

Leave A Comment