Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಶಿಶುವಿನ ರಕ್ತನಾಳಗಳ ಸಮಸ್ಯೆಗೆ ಪರಿಹಾರ ಒದಗಿಸಿದ ಮಣಿಪಾಲ್‌ ಆಸ್ಪತ್ರೆ ವೈದ್ಯರು 3 ವಾರಗಳ ಶಿಶುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

chilಉಡುಪಿ: ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೂರು ವಾರಗಳ ಶಿಶುವಿಗೆ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ಮಣಿಪಾಲ್‌ ಆಸ್ಪತ್ರೆಯ ಹೃದಯ, ಎದೆಭಾಗ ಮತ್ತು ರಕ್ತನಾಳಗಳ ವಿಭಾಗದ ಮುಖ್ಯಸ್ಥ ಡಾ. ದೇವಾನಂದ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಯ ಸತೀಶ್‌ ಮತ್ತು ಸುಪ್ರಿಯಾ ದಂಪತಿಗೆ ಜನಿಸಿದ (ಮನೀಶ್‌)  ಮಗು ಹುಟ್ಟಿದ ಮೂರು ವಾರಗಳಲ್ಲಿಯೇ ಉಸಿರಾಟದ ತೊಂದರೆಗೆ ತುತ್ತಾಗಿತ್ತು. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಮಗುವಿನ ಹೃದಯದಿಂದ ಶುದ್ಧ ಮತ್ತು ಅಶುದ್ಧ ರಕ್ತವನ್ನು ಒಯ್ಯುವ ಪ್ರಮುಖ ರಕ್ತನಾಳಗಳ ಸ್ಥಾನದಲ್ಲಿ ಅದಲು ಬದಲು  (ಟ್ರ್ಯಾನ್ಸ್‌ಪೊಜಿಷನ್‌ ಆಫ್‌ ಗ್ರೇಟ್‌ ಆರ್ಟರೀಸ್‌) ಸ್ಥಿತಿಯಲ್ಲಿತ್ತು. ಸಾವಿರ ಶಿಶುಗಳಲ್ಲಿ ಒಂದು ಶಿಶುವಿಗೆ ಈ ಸಮಸ್ಯೆ ಕಂಡು ಬರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದರಿಂದ ಹುಟ್ಟಿದ ಮಗುವಿನ ದೇಹದಲ್ಲಿ ಅಶುದ್ಧ ರಕ್ತ ಪರಿಚಲನೆ ಉಂಟಾಗಿತ್ತು. ಶಿಶು ಕೇವಲ 1.8 ಕಿ.ಲೋ ತೂಕವಿದ್ದು, ಹುಟ್ಟಿ ಮೂರು ವಾರಗಳು ಮಾತ್ರ ಕಳೆದಿದ್ದರಿಂದ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಮುಖ ರಕ್ತನಾಳಗಳನ್ನು ತಮ್ಮ ಸ್ಥಾನಗಳಿಗೆ ಜೋಡಿಸುವ ಮತ್ತು ಏಕೈಕ ಕರೋನರಿ ಆರ್ಟರಿಯನ್ನು ವರ್ಗಾಯಿ ಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು ಎಂದರು.

ಶಸ್ತ್ರಚಿಕಿತ್ಸೆಯ ಎರಡು ವಾರಗಳ ಬಳಿಕ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಮಗು ಸಂಪೂರ್ಣ ಆರೋಗ್ಯವಾಗಿದ್ದು, ಅದಕ್ಕೆ ಮೂರು ತಿಂಗಳಿಗೆ ಬೇಕಾದ ಬೆಳವಣಿಗೆ ಸಿಕ್ಕಿದೆ. ಅಲ್ಲದೆ ತೂಕದ ಲ್ಲಿಯೂ ಸುಧಾರಣೆಯಾಗಿದೆ ಎಂದು ಹೇಳಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ನವಜಾತ ಶಿಶು ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಲೂಯಿಸ್‌, ಸತೀಶ್‌, ಸುಪ್ರಿಯಾ ಉಪಸ್ಥಿತರಿದ್ದರು.
*
ಜನ್ಮಜಾತ ಹೃದಯ ರೋಗ ಕಂಡು ಬಂದಲ್ಲಿ ಪೋಷಕರು ಆತಂಕಕ್ಕೆ ಒಳಗಾ ಗದೇ ತಕ್ಷಣ ಹೃದಯತಜ್ಞರನ್ನು ಭೇಟಿ ಮಾಡಿ, ಅಗತ್ಯ ಕ್ರಮಗಳು ತಿಳಿದುಕೊಳ್ಳಬೇಕು.
–ಡಾ. ದೇವಾನಂದ,ಸರ್ಜನ್‌

No Comments

Leave A Comment