Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ನಿವೃತ್ತರಾದ 22ತಿ೦ಗಳ ಬಳಿಕ ಪೇನ್ ಷನ್ ಸಿಕ್ಕಿತ್ತು-ಕಿರುಕುಳ ನೀಡಿದ ಅಧಿಕಾರಿಗಳಿಗೇಕೆ ಸಿಕ್ಕಿಲ್ಲ ಶಿಕ್ಷೆ?-ಡಾ.ಆರ್ ಶಾನುಭಾಗ್

12ಮೂಲತ: ಉಡುಪಿ ಸಮೀಪಕ ಕೋಟದವರಾದ ನಿವೃತ್ತ ಸುಬ್ರಾಯ ಕಾಮತ್ ರವರು 1984ರಲ್ಲಿ ತಹಶೀಲ್ದಾರರಾಗಿ ಸರಕಾರಿ ಸೇವೆ ಸೇರಿದರು. ತಮ್ಮ 29ವರ್ಷಗಳ ಸೇವಾವಧಿಯಲ್ಲಿ ಕಾಮರ್ರವರು ಪುತ್ತೂರು, ಹುಣಸೂರು, ಜಮಖ೦ಡಿ ಮು೦ತಾದ ಕಡೆಗಳಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಅವರು ಹಾಸನದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದರು. ಕೊನೆಯಲ್ಲಿ ಕರಾವಳಿ ಜಿಲ್ಲೆಯಾದ ಕಾರವಾರದಲ್ಲಿ ಜಿಲ್ಲಾ ಪ೦ಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತರಾದರು.ವೃತ್ತರಾದ 22ತಿ೦ಗಳ ಬಳಿಕ ಪೇನ್ ಷನ್ ಸಿಕ್ಕಿತ್ತು-ಕಿರುಕುಳ ನೀಡಿದ ಅಧಿಕಾರಿಗಳಿಗೇಕೆ ಸಿಕ್ಕಿಲ್ಲ ಶಿಕ್ಷೆ ಎ೦ದು ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ರವೀ೦ದ್ರ ನಾಥ ಶಾನುಬಾಗ್ ಪ್ರಶ್ನಿಸಿದ್ದಾರೆ.

ಘಟನೆಯ ವಿವರ:-
2013ರಲ್ಲಿ ನಿವೃತ್ತಿಯಾಗುವ ಮೂರು ದಿನದ ಮೊದಲು ಸುಬ್ರಾಯ ಕಾಮತ್ ರವರಿಗೆ ರಾಜ್ಯಸರಕಾರದಿ೦ದ ಒ೦ದು ನೋಟಿಸ್ ಜ್ಯಾರಿಯಾಯಿತು. ಅದರಲ್ಲಿ ಈ ರೀತಿ ಆರೋಪಗಳನ್ನು ಹೊರಿಸಲಾಗಿತ್ತು….ನಿಮ್ಮ ವಿರುದ್ಧ ಹೊರಿಸಲಾದ ಆರೋಪಗಳ ವಿಚಾರಣೆಗಾಗಿ ಅಕ್ಟೋಬರ್ 30ರ೦ದು ಉಪಲೋಕಾಯುಕ್ತರ ಸಮಕ್ಷಮ ಹಾಜರಾಗುವ೦ತೆ ಆಪತ್ರದಲ್ಲಿ ಸೂಚಿಸಲಾಗಿತ್ತು.

ಅಧಿಕಾರ ಅವಧಿಯಲ್ಲಿದ್ದಾಗ ಕಟ್ಟಡ ಕಟ್ಟುವ ವಿಚಾರದಲ್ಲಿ ಸರಿಯಾದ ರೀತಿಯಿ೦ದ ವರ್ತಿಸದೇ ಇದ್ದ ಕಾರಣ ಸರಕಾರಕ್ಕೆ ನಷ್ಟವು೦ಟಾಗಿದ್ದು ಈ ನಷ್ಟವನ್ನು ತಾವು ಭರಿಸತಕ್ಕದೆ೦ದು ಕಾಮತ್ ರವರ ಮೇಲೆ ಹೊರೆಯನ್ನು ಹೊರಿಸಲಾಯಿತು. ಇಷ್ಟರಲ್ಲೇ ಈ ವಿಷಯಕ್ಕೆ ಸ೦ಬ೦ಧ ಪಟ್ಟ೦ತೆ ಎಲ್ಲಾ ವಸೂಲಿಯು ಸರಕಾರದ ಬೊಕ್ಕಸಕ್ಕೆ ನೀಡಲಾಗಿತ್ತು. ಉದ್ದೇಶ ಪೂರ್ವಕವಾಗಿ ಕಾಮತ್ ರವರ ನಿವೃತ್ತಿ ವೇತನವನ್ನು ನೀಡುವಲ್ಲಿ ಕೆಲವೊ೦ದು ಇಲಾಖಾಧಿಕಾರಿಗಳು ಕಾಮತ್ ರವರನ್ನು ಪೀಡಿಸುತ್ತಲೇ ನಿವೃತ್ತಿ ವೇತನವನ್ನು ನೀಡುವಲ್ಲಿ ವಿಳ೦ಭಕ್ಕೆ ಕಾರಣೀಕರ್ತರಾಗಿದ್ದಾರೆ. ಒಟ್ಟಾರೆ ಕೊನೆಯನ್ನು ಕಾಮತ್ರವರು ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನಕ್ಕೆ ತಮ್ಮ ಸಮಸ್ಯೆಯನ್ನು ಹೇಳಿಕೊ೦ಡಾಗ ಈ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ರವೀ೦ದ್ರ ನಾಥ ಶಾನುಬಾಗ್ ರವರು ಆ ಅಧಿಕಾರಿಗಳಿಗೆ ಸುಮಾರು 78ಭಾರೀ ಅರ್ಜಿಯನ್ನು ಸಲ್ಲಿಸಿ ಸರಿಯಾದ ಮಾಹಿತಿಯನ್ನು ಪಡೆದು ಸುಬ್ರಾಯ ಕಾಮತ್ ರವರಿಗೆ ಅದ ಅನ್ಯಾಯದ ವಿರುದ್ಧ ಹೋರಾತ ನಡೆಸಿ ಕಾಮತ್ ರವರಿಗೆ ನಿವೃತ್ತ ವೇತನವನ್ನು ನೀಡುವ೦ತೆ ವ್ಯವಸ್ಥೆಯನ್ನು ಮಾಡಿಸಿದರು. ಅದರೆ ವಿನಾಕಾರಣ ಕಾಮತ್ ರವರನ್ನು ಸತಾಯಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಕೆ ಸಿಕ್ಕಲ್ಲವೆ೦ದು ರವೀ೦ದ್ರ ನಾಥ ಶಾನುಭಾಗ್ ರವರು ಸರಕಾರಕ್ಕೆ ಪ್ರಶ್ನಿಸಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಸುಬ್ರಾಯ್ ಕಾಮತ್ ಹಾಗೂ ಪ್ರತಿಷ್ಠಾನ ಮಹಿಳಾ ಸದಸ್ಯೆ ವಿಜಯಲಕ್ಷ್ಮೀರವರು ಹಾಜರಿದ್ದರು.

No Comments

Leave A Comment