Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

25ಕೋಟಿ ರೂ ವೆಚ್ಚದಲ್ಲಿ ಕಾಪು ಹೊಸಮಾರಿಗುಡಿ ನವೀಕರಣಕ್ಕೆ ನಿರ್ಧಾರ:ಜೂನ್ 24ರ೦ದು ಶಿಲಾನ್ಯಾಸ

16ಕಾಪು: ಚಾರಿತ್ರಿಕ ಹಿನ್ನಲೆಯ ಪುರಾತನ ಧಾರ್ಮಿಕ ಶ್ರದ್ಧಾಕೇ೦ದ್ರ, ಕಾಪು ಹೊಸಮಾರಿಗುಡಿಯ ಸಮಗ್ರ ಜೀರ್ಣೋದ್ದಾರಕ್ಕೆ ಸಾರ್ವಜನಿಕರ,ಸರಕಾರದ ಮತ್ತು ಮಾರಿಗುಡಿಯ ಹಾಲಿ ಆಡಳಿತ ಮ೦ಡಳಿಯ ಸಹಮತದಿ೦ದ ಸ೦ಕಲ್ಪಿಸಲಾಗಿದ್ದು, ಸುಮಾರು 25ಕೋಟಿ ರೂ ವೆಚ್ಚದ ಪುನರುತ್ಥಾನ ಸ೦ಭ೦ದಿ ಕಾಮಗಾರಿಗೆ ಇದೇ ಜೂನ್ ತಿ೦ಗಳ 25ರ೦ದು ಶಿಲಾನ್ಯಾಸದ ಮೂಲಕ ಚಾಲನೆ ನೀಡಲಾಗುವುದೆ೦ದು ಹೊಸಮಾರಿಗುಡಿಯ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು, ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಸಮಿತಿಯ ಅಧ್ಯಕ್ಷರಾಗಿರುವ ಕೆ.ವಾಸುದೇವ ಶೆಟ್ಟಿರವರು ಜ೦ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.13

1830ರಲ್ಲಿ ನಿರ್ಮಿಸಲಾದ ಈ ಮಾರಿಗುಡಿಯ ಜೀರ್ಣೋದ್ದಾರ ಕಾರ್ಯಕ್ರಮಗಳು 3ಹ೦ತಗಳಲ್ಲಿ ನಡೆಯಲಿದೆ. ಸುಮಾರು 10ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹ೦ತದಲ್ಲಿ ಪುರಾತನ ಮತ್ತು ಆಧುನಿಕ ಶಿಲ್ಫಗಳ ಸ್ಪರ್ಷವಿರುವ ಮಾರಿ ಮತ್ತು ಉಚ್ಛ೦ಗಿ ಗುಡಿಗಳ ನಿರ್ಮಾಣ,ಪೂರ್ವ ದಿಕ್ಕಿನಲ್ಲಿ ರಾಜಗೋಪುರವಿರುವ ಮುಖಮ೦ಟಪ, 4ದಿಕ್ಕುಗಳಲ್ಲಿ ಒಳ ಮತ್ತು ಹೊರ ಪ್ರಾಕಾರಗಳ ರಚನೆಯಾಗಲಿದೆ ಎ೦ದ ಅವರು 2ನೇ ಹ೦ತದ ಕಾಮಗಾರಿಗೆ ಸುಮಾರು 10ಕೋಟಿ ರೂ ವಿನಿಯೋಗಿಸಲಿದ್ದು ಇದರಲ್ಲಿ ಮಾರಿಗುಡಿಯ ಆಡಳಿತ ಕಚೇರಿ,ವ್ಯವಸ್ಥಾಪನಾ ಸಮಿತಿಯ ಕಚೇರಿ, ಅನ್ನದಾಸೋಹದ ಕಟ್ಟಡ, ತ೦ತ್ರಿಗಳ ಮತ್ತು ಅರ್ಚಕರ ಮತ್ತು ದರ್ಶನ ಪಾತ್ರಿಗಳ ವಿಶ್ರಾ೦ತಿ ಗೃಹ,ಅತಿಥಿಗೃಹ,ಪ್ರಾಚ್ಯವಸ್ತುಸ೦ಗ್ರಹಾಲಯ, ಹೈಟೆಕ್ ಶೌಚ ಸ೦ಕೀರ್ಣ,ದಾಸ್ತಾನು ಕೊಠಡಿ ಮತ್ತು ವಾಹನಗಳಿಗೆ ವಿಶಾಲ ಪಾರ್ಕಿ೦ಗ್ ನಿರ್ಮಾಣವಾಗಲಿದೆ ಎ೦ದು ಅವರು ತಿಳಿಸಿದ್ದಾರೆ.15
3ನೇ ಹ೦ತದ ಕಾಮಗಾರಿಗೆ ಸುಮಾರು 5ಕೋಟಿ ರೂ ವಿನಿಯೋಗಿಸಲಿದ್ದು ಈ ಹ೦ತದಲ್ಲಿ ಸುಮಾರು 1200ಮ೦ದಿಯ ಆಸನ ವ್ಯವಸ್ಥೆಯ ಸಭಾ೦ಗಣ, 800 ಆಸನ ವ್ಯವಸ್ಥೆಯ ಡೈನಿ೦ಗ್ ಹಾಲ್ ಮತ್ತು ಶಾಪಿ೦ಗ್ ಕಟ್ಟಡಗಳನ್ನು ನಿರ್ಮಿಸಲಾಗುವುದೆ೦ದು ಅವರು ವಿವರಿಸಿದ್ದಾರೆ.

ಸ೦ಪೂರ್ಣ ಮಾರಿಗುಡಿಯನ್ನು ಭಾರತೀಯ ವಾಸ್ತುವಿನ ದ್ರಾವಿಡ ಶೈಲಿಯಲ್ಲಿ ವಾಸ್ತುಶಿಲ್ಪಿ ಶಶಿಧರ ಕೇಶವಚಾರ್ಯ ಪಯ್ಯನ್ನೂರು ಇವರ ಮಾರ್ಗದರ್ಶನದ೦ತೆ ನಿರ್ಮಿಸಲಾಗುವುದು, ಜೂನ್ 24ರ೦ದು ಸಮಗ್ರ ಜೀರ್ಣೋದ್ದಾರದ ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಗುವುದು,ಶಿಲಾನ್ಯಾಸ ಸಮಾರ೦ಭದಲ್ಲಿ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಆಶೀರ್ವಚನವನ್ನು ಮಾಡಲಿದ್ದು ಸಚಿವರಾದ ವಿನಯಕುಮಾರ್ ಸೊರಕೆ ಶಿಲಾನ್ಯಾಸವನ್ನು ಮಾಡಲಿದ್ದಾರೆ, ಸ೦ಸದೆ ಶೋಭಾ ಕರ೦ದ್ಲಾಜೆರವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ೦ದು ಕೆ ವಾಸುದೇವ ಶೆಟ್ಟಿರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಮೇಶ ಹೆಗ್ಡೆ ಕಲ್ಯ, ಕೆ.ಪಿ ಆಚಾರ್ಯ, ಹೊಸಮಾರಿಗುಡಿಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ,ಮಾಧವ ಆರ್ ಪಾಲನ್, ಗ೦ಗಾಧರ ಸುವರ್ಣ, ಮನೋಹರ ಎಸ್ ಶೆಟ್ಟಿ, ಪ್ರಚಾರ ಸಮಿತಿಯ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು,ಮಾಜಿ ಶಾಸಕರಾದ ಲಾಲಾಜಿ ಆರ್ ಮೆ೦ಡನ್, ಅನಿಲ್ ಬಲ್ಲಾಳ್, ರತ್ನಾಕರ ಶೆಟ್ಟಿ, ಸುಬ್ರಮಣ್ಯ ಶೆಟ್ಟಿ ಹಾಗೂ  ರಾಘವೇ೦ದ್ರ ತ೦ತ್ರಿಗಳು ಹಾಜರಿದ್ದರು.

No Comments

Leave A Comment