Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಪಾದರಸ ವ್ಯಕ್ತಿತ್ವದ ಸಂಸದ ನಳಿನ್‌: ಅನಂತ್‌ ಶ್ಲಾಘನೆ

ಮಂಗಳೂರು: ಸದಾ ಕ್ಷೇತ್ರದ ಅಭಿವೃದ್ಧಿಯನ್ನೇ ಮನದಲ್ಲಿ ತುಂಬಿಕೊಂಡು ಆ ನಿಟ್ಟಿನಲ್ಲಿ ತನ್ನೆಲ್ಲಾ ಶ್ರಮ ವ್ಯಯಿಸುತ್ತಿರುವ ನಳಿನ್‌ ಕುಮಾರ್‌ ಕಟೀಲು ಪಾದರಸ ವ್ಯಕ್ತಿತ್ವದ ಕ್ರಿಯಾಶೀಲ ಸಂಸದ ಎಂದು ಕೇಂದ್ರ ರಾಸಾಧಿಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್‌ ಬಣ್ಣಿಸಿದರು.

ಒಂದು ವರ್ಷದ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ರಾಜ್ಯದಲ್ಲಿ ನಂ. 1 ಸ್ಥಾನ ಗಳಿಸಿ ರಾಜ್ಯದ ಉತ್ತಮ ಸಂಸದ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ನಳಿನ್‌ ಕುಮಾರ್‌ ಕಟೀಲು ಅವರನ್ನು ನಗರದ ಟಿ.ವಿ. ರಮಣ ಪೈ ಕನ್ವೆನnalinನ್‌ ಸಭಾಂಗಣದಲ್ಲಿ ಜರಗಿದ “ಸಂಸದರ ಅಭಿನಂದನಾ’ ಸಮಾರಂಭದಲ್ಲಿ ಅವರು ಸಮ್ಮಾನಿಸಿ ಅಭಿನಂದಿಸಿದರು.

ನಳಿನ್‌ ಅವರು ಸಂಸತ್‌ನ ಒಳಗೆ, ಹೊರಗೆ ತನ್ನ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಪರಿಹಾರದ ಬಗ್ಗೆ ಸದಾ ಚಿಂತನೆ ನಡೆಸುತ್ತಿರುವುದನ್ನು ನಾನು ನಿರಂತರವಾಗಿ ಗಮನಿಸುತ್ತಾ ಬಂದಿದ್ದೇನೆ. ಇದಧಿಕ್ಕಾಗಿ ವಿವಿಧ ಖಾತೆಗಳ ಸಚಿವರನ್ನು ಭೇಟಿಧಿಯಾ ಗುಧಿತ್ತಾರೆ. ಸರಳ, ಸಜ್ಜನಿಕೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ನಳಿನ್‌ ಕುಮಾರ್‌ ಕಟೀಲು ಅವರು ರಾಜ್ಯದ 176 ತಾಲೂಕುಗಳಲ್ಲಿ ವ್ಯಕ್ತಧಿವಾದ ಅಭಿಮತಗಳಲ್ಲಿ ಕರ್ನಾಟಕದ ನಂ.1 ಸಂಸದಧಿನಾಗಿ ಮೂಡಿ ಬಂದಿರುವುದು ಹೆಮ್ಮೆಯ ವಿಚಾರಧಿವಾಗಿದೆ. ಅವರ ಕಾರ್ಯ ವೈಖರಿ ದ.ಕ. ಜಿಲ್ಲೆಗೆ ಮಾತ್ರವಲ್ಲದೆ ಇಡೀ ಕರ್ನಾಟಕ ರಾಜ್ಯಕ್ಕೆ ಹೆಗ್ಗಳಿಕೆಯನ್ನು ತಂದಿದೆ ಎಂದರು.

ಇಚ್ಛಾಶಕ್ತಿ, ದೂರದರ್ಶಿತ್ವ 
ಮುಖ್ಯ ಅತಿಥಿಯಾಗಿದ್ದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್‌ ಅವರು ಇಚ್ಛಾಶಕ್ತಿ, ದೂರದರ್ಶಿತ್ವ ಇದ್ದಾಗ ಜನಧಿನಾಯಕಧಿನಾಗಿ ಹೇಗೆ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುಧಿತ್ತಾರೆ ಎಂಬುದನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ತೋರಿಸಿಕೊಟ್ಟಿದ್ದಾರೆ.  ಅವರು ದೇಶದಲ್ಲೇ ನಂ.1 ಸಂಸದನಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಸಾಧನೆಗೆ ಪ್ರೇರಣೆ
ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರು ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಅಭಿನಂದಿಸಿ ಆದರ್ಶಪ್ರಾಯ ಕಾರ್ಯಧಿನಿರ್ವಹಣೆ ಮೂಲಕ ಸಂಸದ ನಳಿನ್‌ ಕುಮಾರ್‌ ಕಟೀಲು ದ.ಕ. ಮಾತ್ರವಲ್ಲದೆ, ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂದಿನ ಸಮ್ಮಾನ ಇನ್ನಷ್ಟು ಹೆಚ್ಚಿನ ಸಾಧನೆಗೆ ನೀಡಿರುವ ಪ್ರೇರಣೆ ಎಂದರು. ಮೈಸೂರು ಸಂಸದ ಪ್ರತಾಪಸಿಂಹ ಅವರು, ದ.ಕ. ಜಿಲ್ಲೆ ಓರ್ವ ಉತ್ತಮ ಸಂಸದ ನನ್ನುಆಯ್ಕೆ ಮಾಡಿದೆ ಎಂದು ಬಣ್ಣಿಸಿದರು.

ಜಿಲ್ಲೆಯನ್ನು ನಂ.1 ಸ್ಥಾನಕ್ಕೆ ತರುವ ಗುರಿ
ನಳಿನ್‌ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹತ್ತಾರು ಚಿಂತನೆಗಳನ್ನು ಹೊಂದಿದ್ದೇನೆ. ಅವುಗಳನ್ನು ಸಾಕಾರಗೊಳಿಸಬೇಕು ಎಂಬುದು ನನ್ನ ಗುರಿ. ನನ್ನ ಲಕ್ಷ್ಯ ನಾನು ನಂ.1 ಸಂಸದನಾಗಿ ಮೂಡಿಬರಬೇಕೆಂಬುದರ ಬದಲು ದ.ಕ. ಜಿಲ್ಲೆ ನಂ.1 ಕ್ಷೇತ್ರವಾಗಿ ಮೂಡಿಬರುವುದು ಎಂದರು.

ಹಾಂಗ್ಯೋ ಐಸ್‌ಕ್ರೀಂ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಪೈ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌, ರೋಹನ್‌ ಕಾರ್ಪೊರೇಶನ್‌ ಪ್ರೈ.ಲಿ. ಆಡಳಿತ ನಿರ್ದೇಶಕ ರೋಹನ್‌ ಮೊಂತೇರೊ, ಸುಳ್ಯ ಶಾಸಕ ಅಂಗಾರ, ಗಣ್ಯರಾದ ಆಶಾ ತಿಮ್ಮಪ್ಪ ಗೌಡ, ಪ್ರೊ| ಎಂ.ಬಿ. ಪುರಾಣಿಕ್‌, ರುಕ್ಮಯ ಪೂಜಾರಿ, ಎಸ್‌.ಎಸ್‌. ಕಾಮತ್‌, ಉದಯಚಂದ್ರ ಸುವರ್ಣ,ನಿಗಮ್‌ ವಸಾನಿ,  ರಾಜವರ್ಮ ಬಲ್ಲಾಳ್‌, ಉಳ್ಳಾಲ ಮೋಹನ್‌ ಕುಮಾರ್‌, ಗಣೇಶ್‌ ಶೆಟ್ಟಿ, ಶಿವಕುಮಾರ್‌ ಕೆ., ಕ್ಯಾ| ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಎಂ. ಪದ್ಮನಾಭ ಪೈ, ಡಾ| ಶಿವಶರಣ್‌ ಶೆಟ್ಟಿ, ಲೀಲಾಕ್ಷ ಕರ್ಕೇರ, ನಿವೇದಿತಾ ಎನ್‌. ಶೆಟ್ಟಿ  ಉಪಸ್ಥಿತರಿದ್ದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್‌ ಸ್ವಾಗತಿಸಿದರು.

ಮತದಾರರು, ಕಾರ್ಯಕರ್ತರಿಗೆ ಅರ್ಪಣೆ 
ನನಗೆ ಇಂದು ಸಂದಿರುವ ಅಭಿನಂದನೆಯನ್ನು ನನ್ನನ್ನು ಬೆಳೆಸಿದ ಕ್ಷೇತ್ರದ ಮತದಾರ ಬಂಧುಗಳಿಗೆ, ನನ್ನ ಬೆಳವಣಿಗೆಗೆ ಬೆವರು ಸುರಿಸಿ ಶ್ರಮಿಸಿದ ಕಾರ್ಯಧಿಕರ್ತರಿಗೆ, ನನಗೆ ಮಾರ್ಗದರ್ಶನ, ಸಂಸ್ಕಾರ ನೀಡಿ ರೂಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಾಗೂ ನನಗೆ ಅವಕಾಶ ನೀಡಿ ಈ ಮಟ್ಟಕ್ಕೇರಿಸಿದ ಭಾರತೀಯ ಜನತಾ ಪಕ್ಷಕ್ಕೆ ಅರ್ಪಿಸುತ್ತಿದ್ದೇನೆ ಎಂದು ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸಂಸದರ ನಿಧಿಯ ಸಮರ್ಪಕ ಬಳಕೆ ಪಕ್ಷದ ಕಾರ್ಯಕರ್ತರು, ಜಿಲ್ಲೆಯ ಅಧಿಕಾರಿ ನೀಡಿರುವ ಸಹಕಾರ ಮಹತ್ತರಧಿವಾದುದು ಎಂದವರು ಹೇಳಿದರು.

ಸಮಸ್ಯೆಗಳಿಗೆ ಸ್ಪಂದನೆ
ನಳಿನ್‌ ಕುಮಾರ್‌ ಕಟೀಲು ತಮ್ಮ ಕ್ಷೇತ್ರದ ಅಭಿವೃದ್ಧಿ, ಜನತೆಯ ಸಮಸ್ಯೆಯ ಪರಿಹಾರ ವಿಚಾರದಲ್ಲಿ ಸದಾ ಶ್ರಮಿಸುತ್ತಾರೆ. ಅಡಿಕೆ ಬೆಳೆಧಿಗಾರರ ಸಮಸ್ಯೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಗೆ ನಿಯೋಗ ಒಯ್ದು ಅಡಿಕೆ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ಮಂಗಳೂರು ರಸಧಿಗೊಬ್ಬರ ಕಾರ್ಖಾನೆಯನ್ನು ಉಳಿಧಿಸುವ ನಿಟ್ಟಿನಲ್ಲಿ ಅವರ ಶ್ರಮವೂ ಮಹತ್ತರಧಿವಾದುದು ಎಂದು ಸಚಿವ ಅನಂತ್‌ ಕುಮಾರ್‌ ಹೇಳಿದರು.

No Comments

Leave A Comment