Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬೆಂಗಳೂರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ/Minor gang raped in Bengaluru; 3arrested

11ಬೆಂಗಳೂರು/ರಾಮನಗರ: ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿ ಮೇಲೆ ಮೂವರು ಅತ್ಯಾಚಾರ ಎಸಗಿರುವ ಘಟನೆ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. 

ಮತ್ತೊಂದು ಪ್ರಕರಣದಲ್ಲಿ, ಮದುವೆಯಾಗುವುದಾಗಿ ನಂಬಿಸಿ ಪ್ರೇಮಿಯೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಮನಗರಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ತಮಿಳುನಾಡಿನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳ ಪೈಕಿ ಒಬ್ಬ, ಬಾಲಕಿಯನ್ನು ಪ್ರೀತಿಸುವ ನಾಟಕ ಮಾಡಿದ್ದ. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಸ್ನೇಹಿತರೊಂದಿಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಬಂಧಿತರನ್ನು ಅಸಯ್, ಸಂತೋಷ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆದಿದೆ. ಬಂಧಿತರು ತಮಿಳುನಾಡು ಮೂಲದವರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

‘ಬುಧವಾರ ಪ್ರಕರಣ ನಡೆದಿದ್ದು, ಸುದ್ದಿ ತಿಳಿದ ಕೂಡಲೇ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ,’ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಅಜ್ಜಿ ಜತೆ ವಾಸವಿದ್ದ ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ಮಾಡಿದ ನಟಿ ತಾರಾ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಅತ್ಯಾಚಾರದಂತಹ ಹೀನ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೊಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಮದುವೆ ಆಗುವ ಭರವಸೆ ನೀಡಿ ಅತ್ಯಾಚಾರ: 

ಮದುವೆಯಾಗುವುದಾಗಿ ನಂಬಿಸಿ ಪ್ರೇಮಿಯೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಮನಗರಗದಲ್ಲಿ ಬೆಳಕಿಗೆ ಬಂದಿದೆ. 

ರಾಮನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಕಾರು ಕೆಟ್ಟು ಹೋಗಿದೆ ಎಂಬ ನೆಪ ಹೇಳಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಬಗ್ಗೆ ವರದಿಯಾಗಿದೆ. ಪ್ರಕರಣ ಸಂಬಂಧ ಬಾಲಕಿಯ ಪ್ರೇಮಿ ತುಮಕೂರು ಮೂಲದ ಗಿರೀಶ್ ಮತ್ತು ಆತನ ಇಬ್ಬರು ಸ್ನೇಹಿತರಾದ ಗಂಗರಾಜ್ ಮತ್ತು ಕೆಂಪರಾಜ್ ಎಂಬುವವನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸಿದ್ದಾರೆ. 

ಪ್ರಕರಣ ಏನು ? 

ತುಮಕೂರು ಮೂಲದ ಗಿರೀಶ್, ರಾಮನಗರ ಮೂಲದ ಅಪ್ರಾಪ್ತ ಬಾಲಕಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ಹೇಳಿ. ಆಕೆಯನ್ನು ಪುಸಲಾಯಾಸಿ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಿದ್ದ. ಇದಕ್ಕೆ ತನ್ನ ಇಬ್ಬರು ಸ್ನೇಹಿತರಾದ ಗಂಗರಾಜ್ ಮತ್ತು ಕೆಂಪರಾಜ್ ಎಂಬುವವರ ಸಹಾಯ ಪಡೆದಿದ್ದ. ಮಾರ್ಗ ಮಧ್ಯೆ ಕಾರು ಕೆಟ್ಟು ಹೋಗಿದ್ದು, ಸ್ನೇಹಿತರು ಕಾರಿನಿಂದ ಕೆಳಗಿಳಿದು ಹೋದಾಗ ಪ್ರೇಮಿ ಗಿರೀಶ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಬಾಲಕಿಯನ್ನು ಅದೇ ಕಾರಿನಲ್ಲಿ ಆಕೆಯ ಮನೆ ಬಳಿ ಬಿಟ್ಟು ಹೋಗಿದ್ದ. ಬಾಲಕಿಯಿಂದ ವಿಷಯ ತಿಳಿದ ಕೂಡಲೇ ಪೋಷಕರು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

A 15-year-old girl was allegedly gang raped by three youths from her neighbourhood in Bengaluru on Wednesday afternoon.

J.P. Nagar police rounded up the three youths hours after the incident was reported on Wednesday night. Police confirmed that a preliminary report of the medical examination conducted on the girl at Victoria Hospital, has confirmed it to be a rape case.

The girl, a school drop-out was living with her grandmother in a slum in J.P. Nagar police limits. The incident occurred on Wednesday afternoon at around 2 p.m., when the girl was alone at her house as her grandmother had been out on work.

The three youths, now arrested – Asai (19) a vegetable vendor, Santosh (21) a water can delivery boy and Ajay (21) an auto driver – are neighbours of the girl in the slum and had befriended her earlier. The gang lured the girl out with them and the gullible girl willingly went out with the gang to an under-construction building in a deserted spot in the area, where the three youths gang raped her. The sexual assault lasted for more than an hour, investigations have now revealed.

The youths threatened with dire consequences if the girl revealed the incident to anybody. The girl promised not to reveal the incident to anybody after which the gang let her go. She reported the incident to her grandmother after she returned from work, who approached the police and lodged a formal complaint.

J.P. Nagar police have now arrested the three youths and have booked them under POCSO Act, 2012 and under Section 376D of Indian penal code.

No Comments

Leave A Comment