Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ರಂಜಾನ್ ಹಿನ್ನೆಲೆ; ಪಾಕ್ ನಿಂದ 113 ಭಾರತೀಯ ಮೀನುಗಾರರ ಬಿಡುಗಡೆ

fisherrmenಕರಾಚಿ: ಉಭಯ ದೇಶಗಳ ನಡುವೆ ವಾಕ್ಸಮರ ನಡೆದ ಬಳಿಕ ಪವಿತ್ರ ರಂಜಾನ್ ತಿಂಗಳ ಆರಂಭದ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೆರೆಯ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಷಯ ತಿಳಿಸಿದ ಬೆನ್ನಿಗೆ ಪಾಕ್ ಗುರುವಾರ 113 ಭಾರತೀಯ ಮೀನುಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಶುಕ್ರವಾರದಿಂದ ಪವಿತ್ರ ರಂಜಾನ್ ತಿಂಗಳು ಆರಂಭವಾಗಲಿದ್ದು, ಉತ್ತಮ ಸೂಚನೆ ಎಂಬಂತೆ ಮಾಲಿರ್ ಜೈಲಿನಿಂದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿರುವ ಬಗ್ಗೆ ನಾವು ಇಸ್ಲಾಮಾಬಾದ್ ನಿಂದ ಆದೇಶವನ್ನು ಪಡೆದಿರುವುದಾಗಿ ಸಹಾಯಕ ಜೈಲು ಸೂಪರಿಟೆಂಡೆಂಟ್ ಮುಹಮ್ಮದ್ ಹುಸೈನ್ ಸೆಹಟೋ ಪಿಟಿಐಗೆ ತಿಳಿಸಿದ್ದಾರೆ.

113 ಭಾರತೀಯ ಮೀನುಗಾರರು ಕಾರಾಕೋರಂ ಎಕ್ಸ್ ಪ್ರೆಸ್ ಮೂಲಕ ಲಾಹೋರ್ ಗೆ ತೆರಳಲಿದ್ದಾರೆ. ನಾಳೆ ಅವರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

No Comments

Leave A Comment