Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮೋದಿ ಲಂಡನ್ ವಾಸ; ಸುಪ್ರೀಂ ಮಾಜಿ ಜಡ್ಜ್ ಕೂಡಾ ನೆರವು ಕೊಟ್ಟಿದ್ರು!

Lalithನವದೆಹಲಿ: ಐಪಿಎಲ್ ಹಗರಣದ ಪ್ರಮುಖ ಆರೋಪಿ, ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣಕಾಸು ವ್ಯವಹಾರ ಆರೋಪ ಹೊತ್ತಿದ್ದ ಲಲಿತ್ ಮೋದಿಗೆ ಲಂಡನ್ ಗೆ ಪರಾರಿಯಾಗಲು (ಆಪರೇಷನ್ ಲಲಿತ್!) ವೀಸಾ ನೆರವು ಹಾಗೂ ಅಲ್ಲೇ ಉಳಿಯಲು ಸಹಾಯ ಮಾಡಿದವರ ಪಟ್ಟಿಯಲ್ಲಿ ರಾಜಕಾರಣಿಗಳು ಮಾತ್ರವಲ್ಲ, ಆ ಸಾಲಿಗೆ ಇದೀಗ ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಹೆಸರು ಸೇರಿಕೊಂಡಿದೆ.

ಲಲಿತ್ ಮೋದಿಗೆ ವೀಸಾ ಹಾಗೂ ನೆರವು ನೀಡಿದ್ದ ವಿವಾದದಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ್ ಮುಖ್ಯಮಂತ್ರಿ ವಸುಂಧರಾ ರಾಜೇ, ಪುತ್ರ ದುಶ್ಯಂತ ಸಿಲುಕಿದ್ದರೆ, ಮತ್ತೊಂದೆಡೆ 2012ರಲ್ಲಿ ಲಲಿತ್ ಮೋದಿ ವಿಸಿಟರ್ಸ್ ವೀಸಾ ಅವಧಿ ಮುಗಿದಿದ್ದರೂ ಕೂಡಾ ಮೋದಿ ಲಂಡನ್ ನಲ್ಲಿಯೇ ಉಳಿಯುಂತೆ ನೆರವು ನೀಡಿದವರಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಉಮೇಶ್ ಸಿ.ಬ್ಯಾನರ್ಜಿ ಕೂಡಾ ಸೇರಿದ್ದಾರೆ ಎಂದು ಮೇಲ್ ಟುಡೇ ವರದಿ ಮಾಡಿದೆ.

ದಿವಂಗತ ಉಮೇಶ್ ಸಿ.ಬ್ಯಾನರ್ಜಿ ಈ ಹಿಂದೆ ಆಂಧ್ರಪ್ರದೇಶದ ಮುಖ್ಯ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಲಂಡನ್ ನಲ್ಲಿ ವಾಸ ಮುಂದುವರಿಸಲು ಅನುಕೂಲವಾಗುವಂತೆ ಲಲಿತ್ ಮೋದಿ ಪರ ಕಾನೂನು ಅಭಿಪ್ರಾಯದ ಒಪ್ಪಿಗೆ ನೀಡಿದ್ದರು ಎಂದು ವರದಿ ವಿವರಿಸಿದೆ.

2010ರಲ್ಲಿ ಮೋದಿ ಲಂಡನ್ ಗೆ ತೆರಳಿದ್ದು:
ತಮ್ಮ ವಿರುದ್ಧ ಹಣಕಾಸು ಅಕ್ರಮದ ಆರೋಪಗಳು ಕೇಳಿ ಬಂದಾಗ ಲಲಿತ್ ಮೋದಿ 2010ರಲ್ಲಿ ಭಾರತ ಬಿಟ್ಟು ಲಂಡನ್ ಗೆ ತೆರಳಿದ್ದರು. ಯುಪಿಎ ಸರ್ಕಾರ ಇದ್ದಾಗ 2011ರಲ್ಲಿ ಲಲಿತ್ ಮೋದಿ ಅವರ ಪಾಸ್ ಫೋರ್ಟ್ ಅನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಲಲಿತ್ ಮೋದಿ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ 2014ರ ಅಕ್ಟೋಬರ್ 27ರಂದು ದಿಲ್ಲಿ ಹೈಕೋರ್ಟ್ ಲಲಿತ್ ಪರ ತೀರ್ಪು ನೀಡಿ, ಪಾಸ್ ಫೋರ್ಟ್ ರದ್ದು ಆದೇಶವನ್ನೇ ರದ್ದುಗೊಳಿಸಿತ್ತು.

ಮೋದಿಗೆ ಬ್ಯಾನರ್ಜಿ ನೆರವು:
ಲಲಿತ್ ಮೋದಿ ವಲಸೆ ಪ್ರಕರಣವನ್ನು ನಿಭಾಯಿಸುತ್ತಿರುವ ತಂಡದ ಅಂತಾರಾಷ್ಟ್ರೀಯ ವಕೀಲರಾದ ಹೇಮಂತ್ ಬಾರ್ತಾ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ವರದಿ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಲಂಡನ್ ನಲ್ಲಿ ಉಳಿಯಲು ಮೂವರ ಕಾನೂನು ಅಭಿಪ್ರಾಯ ಕಾರಣವಾಗಿದೆ. ಅದರಲ್ಲಿ ಇಬ್ಬರು ಭಾರತೀಯರು, ಮತ್ತೊಬ್ಬರು ಅಂತಾರಾಷ್ಟ್ರೀಯ ಜ್ಯೂರಿಸ್ಟ್. ಅವರಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಒಬ್ಬರಾಗಿದ್ದಾರೆ. ಮೋದಿಗೆ ಅನುಕೂಲವಾಗುವ ಕಾನೂನು ಅಭಿಪ್ರಾಯವನ್ನು ಬ್ಯಾನರ್ಜಿ ನೀಡಿದ್ದರು ಎಂದು ಬಾರ್ತಾ ವಿವರಿಸಿದ್ದಾರೆ.

ಅಂದಿನ ಆಡಳಿತಾರೂಢ ಯುಪಿಎ ಸರ್ಕಾರ ಮತ್ತು ಬಿಸಿಸಿಐ ನಿರ್ದೇಶನದ ಮೇರೆಗೆ ಭಾರತೀಯ ಅಧಿಕಾರಿಗಳು ರಾಜಕೀಯವಾಗಿ ಲಲಿತ್ ಮೋದಿ ಅವರನ್ನು ಹಣಿಯಲು ಮುಂದಾಗಿದ್ದ ಸಂದರ್ಭದಲ್ಲಿ ಮೋದಿ ಲಂಡನ್ ನಲ್ಲಿಯೇ ವಾಸ ಮುಂದುವರಿಸಲು ಅನುಕೂಲವಾಗುವಂತೆ ಬ್ಯಾನರ್ಜಿ ಸಮ್ಮತಿ ನೀಡಿದ್ದರು ಎಂದು ವರದಿ ವಿವರಸಿದೆ.

ಉಮೇಶ್ ಸಿ ಬ್ಯಾನರ್ಜಿ ಯಾರು?
*ಉಮೇಶ್ ಚಂದ್ರ ಬ್ಯಾನರ್ಜಿ ಕೋಲ್ಕತಾ ಹೈಕೋರ್ಟ್ ಖಾಯಂ ನ್ಯಾಯಾಧೀಶರಾಗಿದ್ದರು. ಅಲ್ಲದೇ ಆಂಧ್ರಪ್ರದೇಶ ಹೈಕೋರ್ಟ್ ಜಡ್ಜ್ ಆಗಿಯೂ ಸೇವೆ ಸಲ್ಲಿಸಿದ್ದರು.
*ಬ್ಯಾನರ್ಜಿ ಅವರನ್ನು 1998ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕ ಮಾಡಲಾಗಿತ್ತು. 2002ರಲ್ಲಿ ಅವರು ನಿವೃತ್ತರಾಗಿದ್ದರು.
*ಉಮೇಶ್ ಚಂದ್ರ ಬ್ಯಾನರ್ಜಿ ಅವರು ಸಾರ್ಕ್ ಕಾನೂನು ಅಧ್ಯಕ್ಷರಾಗಿದ್ದರು.
*ಬ್ಯಾನರ್ಜಿ 2012ರ ನವೆಂಬರ್ 5ರಂದು ಸಾವನ್ನಪ್ಪಿದ್ದರು.

No Comments

Leave A Comment