Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮುಂಬಯಿ ಎಡಿಸಿಪಿ ಕನ್ನಡಿಗ ಪ್ರಕಾಶ್‌ ಭಂಡಾರಿ

Prakash-Bhandaryಮಂಗಳೂರು : ಮುಂಬೈನ ಕನ್ನಡಿಗ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಭಂಡಾರಿ ಇದೀಗ ಮಹಾರಾಷ್ಟ್ರ ಪೊಲೀಸ್‌ ಇಲಾಖೆಯ ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತರಾಗಿ ನಿಯುಕ್ತಿಗೊಂಡಿದ್ದಾರೆ.

ಅತ್ಯಂತ ಕನಿಷ್ಠ ಅವಧಿಯಲ್ಲಿ ಮುಂಬೈ ಭೂಗತ ಲೋಕದ 54 ಕ್ರಿಮಿನಲ್‌ಗ‌ಳನ್ನು ಎನ್‌ಕೌಂಟರ್‌ ನಡೆಸಿ ಮಾಫಿಯಾ ದೊರೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದ ಪ್ರಕಾಶ್‌ ಭಂಡಾರಿ ಈ ಹಿಂದೆ ಅಪರಾಧ ನಿಗ್ರಹ ದಳ, ರಿಸರ್ವ್‌ ಬ್ಯಾಂಕ್‌ನ ಭದ್ರತಾ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು.

1985 ಬ್ಯಾಚ್‌ನ ಪೊಲೀಸ್‌ ಅಧಿಕಾರಿಯಾಗಿರುವ ಪ್ರಕಾಶ್‌ ಭಂಡಾರಿ ಬಿಕಾಂ ಹಾಗೂ ಕಾನೂನು ಪದವೀಧರ. ಮಹಾರಾಷ್ಟ್ರ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ನ ಪರೀಕ್ಷೆ ಹಾಗೂ ಸ್ಪರ್ಧಾಕೂಟದಲ್ಲಿ ಮಹಾರಾಷ್ಟ್ರ ವಲಯದಲ್ಲಿ ಪ್ರಥಮ ಸ್ಥಾನ ಪಡೆದವರು.

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು ಆರಂಭಿಸಿರುವ ಚಿಣ್ಣರ ಬಿಂಬ ಸಂಸ್ಥೆ ಮಹಾರಾಷ್ಟ್ರದಾದ್ಯಂತ ದ.ಕ. ಜಿಲ್ಲೆ ಹಾಗೂ ರಾಜ್ಯದ ಸಾಂಸ್ಕೃತಿಕ ಕಲೆಗಳನ್ನು ಪಸರಿಸುತ್ತಿದೆ.

ಮುಂಬೈ ಭೂಗತ ಜಗತ್ತಿನಿಂದ ದ.ಕ. ಹಾಗೂ ಉಡುಪಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಉದ್ಯಮಿಗಳ ಪ್ರಾಣ ಕಾಪಾಡಿದ ಹೊಗಳಿಕೆ ಪ್ರಕಾಶ್‌ ಭಂಡಾರಿ ಅವರದ್ದು.

No Comments

Leave A Comment