Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಅಮಿತ್‌ ಷಾಗೆ ಮುಸ್ಲಿಂ ಯುವತಿಯರಿಂದ ಯೋಗಪಾಠ

pvec26Mಪಟ್ನಾ (ಐಎಎನ್‌ಎಸ್‌): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಇಬ್ಬರು ಮುಸ್ಲಿಂ ಯುವತಿಯರು ಯೋಗದ ಪಾಠ ಹೇಳಿಕೊಡಲಿದ್ದಾರೆ.  ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂನ್‌ 21 ರಂದು ಮೊಯಿನುಲ್‌ ಹಖ್‌ ಕ್ರೀಡಾಂಗಣದಲ್ಲಿ  ಷಾ ಯೋಗ ಕಲಿಯಲಿದ್ದಾರೆ.

 ‘ಬಿಹಾರದ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಸರಯಾನ್‌ ಗ್ರಾಮದ ರುಕ್ಸಾನಾ ಖಾತೂನ್‌ ಮತ್ತು ಬಿಸ್ಮಿಲ್ಲಾ ಖಾತೂನ್‌ ಪಾಠ ಹೇಳಿಕೊಡಲಿರುವ ಯುವತಿಯರು. ಕೇಂದ್ರ ಸಚಿವರು ಸೇರಿದಂತೆ ಇತರ ಗಣ್ಯರು ಯೋಗದಿನದ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ’ ಎಂದು ಬಿಹಾರ– ಜಾರ್ಖಂಡ್‌ನ ಪತಂಜಲಿ ಯೋಗಪೀಠದ ಉಸ್ತುವಾರಿ ಅಜಿತ್‌ ಕುಮಾರ್ ಹೇಳಿದ್ದಾರೆ.

ಈ ಇಬ್ಬರು ಯುವತಿಯರು ಯೋಗಾಸನಲ್ಲಿ ನಿಪುಣರಾಗಿದ್ದು, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ  ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.   ಷಾ ಅವರೊಂದಿಗೆ ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್, ರಾಜೀವ್‌ ಪ್ರತಾಪ್‌ ರೂಡಿ, ರಾಧಾಮೋಹನ್ ಸಿಂಗ್ ಹಾಗೂ ರಾಮ್‌ ಕೃಪಾಲ್‌ ಯಾದವ್‌ ಅವರು ಭಾಗವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ‘ಶೋಕಿ ಮತ್ತು ಪ್ರಚಾರಕ್ಕಾಗಿ’ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಟೀಕಿಸಿದ್ದಾರೆ.  ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ದೂರ ಸಂಪರ್ಕ ಸಚಿವ  ರವಿಶಂಕರ್ ಪ್ರಸಾದ್‌, ನಿತೀಶ್‌ ಕುಮಾರ್‌ ಅವರು ಶಾಂತ ಚಿತ್ತವಾಗಿರಲು  ‘ಪ್ರಾಣಾಯಾಮ’ ಅಭ್ಯಾಸ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

No Comments

Leave A Comment