Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಉಡುಪಿ ಜಯಂಟ್ಸ್ ಎವರ್ ಗ್ರೀನ್ ಸೆಹೆಲಿಯ ವತಿಯಿಂದ ಪುರಸ್ಕಾರ

DSC_4553ಉಡುಪಿ ಜಯಂಟ್ಸ್ ಎವರ್ ಗ್ರೀನ್ ಸೆಹೆಲಿಯ ವತಿಯಿಂದ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಮಹಾಲಸ ಮತ್ತು ಅಕ್ಷತಾ ಪ್ರಭು (ಸರಕಾರಿ ಫ್ರೌಢ ಶಾಲೆ ಉಡುಪಿ) ಉಡುಪಿಯ ನಂದನ ಸೊಸೈಟಿಯ ಸಭಾಂಗಣದಲ್ಲಿ ಕಾರ್ಯಕ್ರಮ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗುರುಪ್ರಸಾದ, ಉಪನ್ಯಾಸಕರು, ಕೋಟ ವಿವೇಕ ಪದವಿ ಪೂರ್ವ ಕಾಲೇಜು. ಇವರು ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲು, ಫಲವಸ್ತು , ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಯಂಟ್ಸ್ ಕೇಂದ್ರ ಸಮಿತಿಯ ಸದಸ್ಯರಾದ ದಿನಕರ ಅಮೀನ್, ವಲಯ ನಿರ್ದೇಶಕರಾದ ದೇವದಾಸ್ ಕಾಮತ್, ತೇಜೇಶ್ವರ ರಾವ್, ವಿಶ್ವನಾಥ ಶೆಣೈ ಜಯಂಟ್ಸ್, ಎವರ್ ಗ್ರೀನ್ ಸೆಹೆಲಿಯ ಅಧ್ಯಕ್ಷರಾದ ಜಯಶ್ರೀ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿಯಾದ ಶ್ರೀಮತಿ ಸರಿತಾ ಡಿ.ಸೋಜ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಗೈದರು. ಶ್ರೀಮತಿ ನಿಮಿತಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಯಂಟ್ಸ್ ಎವರ್ ಗ್ರೀನ್ ಸೆಹೆಲಿಯ ನಿರ್ದೇಶಕರು ಮತ್ತು ಮಹಿಳಾ ಸದಸ್ಯರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

No Comments

Leave A Comment