Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ನೀರು ಕೊಡಿ,ಇಲ್ಲಾ ಕರ್ನಾಟಕ ಸೇರಲು ಬಿಡಿ; 42 ಮಹಾರಾಷ್ಟ್ರ ಗ್ರಾಮಸ್ಥರು

name_boar_ಮುಂಬೈ: ಮಹತ್ವದ ರಾಜಕೀಯದ ಬೆಳವಣಿಗೆಯಲ್ಲಿ ಕಳೆದ 2 ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿದ್ದ ಹಿನ್ನೆಲೆಯಲ್ಲಿ ಕೂಡಲೇ ತಮಗೆ ನೆರೆಯ ಕರ್ನಾಟಕ ರಾಜ್ಯ ಸೇರಲು ಎನ್ಒಸಿ (ಆಕ್ಷೇಪಣಾರಹಿತ ಪತ್ರ) ನೀಡುವಂತೆ ಸಾಂಗ್ಲಿಯ 42 ಗ್ರಾಮಗಳ ಜನರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರಿಗೆ ಪತ್ರ ಬರೆದಿದ್ದಾರೆ.

ಗಡಿ ಗ್ರಾಮಗಳಿಗೆ ನೀರೊದಗಿಸಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಎನ್ಒಸಿ ನೀಡಿ ಎಂದು ಸಾಂಗ್ಲಿ ಜಿಲ್ಲೆಯ ಗಡಿನಾಡ ಕನ್ನಡಿಗರು ಮಹಾರಾಷ್ಟ್ರಕ್ಕೆ ಒತ್ತಾಯಿಸಿದ್ದಾರೆ.

ತಾಲೂಕು ಪಾನಿ ಸಂಘರ್ಷ ಸಮಿತಿ (ಟಿಪಿಎಸ್ಎಸ್), ಉಮಾಡಿ ಗ್ರಾಮಸ್ಥರು ಜಾಥ್ ತಾಲೂಕಿನಲ್ಲಿ ಸಭೆ ಸೇರಿ ಕುಡಿಯುವ ನೀರಿನ ಕೊರತೆ ಬಗ್ಗೆ ಚರ್ಚಿಸಿದ್ದರು. ಅಲ್ಲದೇ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಅಹವಾಲನ್ನು ಪತ್ರ ಮುಖೇನ ಬರೆದು ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಶಿವಸೇನೆ ಅಧ್ಯಕ್ಷ ಉದ್ದವ್ ಠಾಕ್ರೆ, ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಪತ್ರ ಬರೆದಿದ್ದಾರೆ.

ನೆರೆಯ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾಗುತ್ತೇವೆ ಎಂಬ ಪಶ್ಚಿಮ ಮಹಾರಾಷ್ಟ್ರ ತಾಲೂಕು ನಿವಾಸಿಗಳ ಬೇಡಿಕೆ ಮೊದಲ ಸಲ ಅಲ್ಲ. ಈಗಾಗಲೇ ಸಾಕಷ್ಟು ಬಾರಿ ಬೇಡಿಕೆ ಇಟ್ಟಿದ್ದರು. ಆದರೆ ಈ ಸಲ ಗ್ರಾಮಸ್ಥರು ತಮ್ಮ ಬೇಡಿಕೆಯ ನಿಲುವಿನಲ್ಲಿ ಖಚಿತತೆ ಹೊಂದಿದ್ದಾರೆ.

ಜಾಥ್ ತಾಲೂಕು ಗಡಿಗಳಾದ ಬೆಳಗಾವಿ, ವಿಜಯವಾಡ ಜಿಲ್ಲೆಗಳಲ್ಲಿ ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ನಾವು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸರ್ಕಾರಕ್ಕೂ ನಮ್ಮ ಸಮಸ್ಯೆ ಬಗ್ಗೆ ಗೊತ್ತಿದೆ. ಕಳೆದ 20 ವರ್ಷಗಳಿಂದ ಈ ಸಮಸ್ಯೆ ಇದೆ. ಆದರೆ ಈವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಟಿಪಿಎಸ್ಎಸ್ ಅಧ್ಯಕ್ಷ ಸುನೀಲ್ ಪೋತ್ ದಾರ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತೊಂದು ಭಾಗದ ಗಡಿಯಲ್ಲಿರುವ ಜನರಿಗೆ ನೀರು ಸಿಗುತ್ತಿದೆ. ಅದು ನಮ್ಮಿಂದ ಕೆಲವೇ ಕಿಮೀಗಳಷ್ಟು ಮಾತ್ರ ದೂರದಲ್ಲಿದೆ. ಆದರೆ ನಮಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದ ಹೆಂಗಸರು ಕೆಲವು ಕಿ.ಮೀಗಳಷ್ಟು ನಡೆದುಕೊಂಡು ಹೋಗಿ ನೀರನ್ನು ತರಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

No Comments

Leave A Comment