Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಲಲಿತ್ ಮೋದಿಯಿಂದ ರಾಜೇ ಪುತ್ರನ ಸಂಸ್ಥೆಗೆ 11.63 ಕೋಟಿ ರೂ. ವರ್ಗಾವಣೆ

vasundhararajelalitmodiನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನೆರವಾದ ವಿವಾದದಲ್ಲಿ (ಲಲಿತ್ ಮೋದಿಗೆ ನೆರವು;ಈಗ ರಾಜೇ ಹೆಸರು ಸ್ಫೋಟ) ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಿಲುಕಿದ್ದ ಬೆನ್ನಿಗೇ ಬಿಜೆಪಿ ಆಡಳಿತದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಕೊರಳಿಗೂ ವಿವಾದ ಸುತ್ತಿಕೊಂಡಿದ್ದು, ಇದೀಗ ತನಿಖೆಯಲ್ಲಿ ಒಂದೊಂದೇ ವಿಷಯಗಳು ಬಯಲಾಗತೊಡಗಿದೆ.

ಲಲಿತ್ ಮೋದಿಯಿಂದ 11.63 ಕೋಟಿ ರೂಪಾಯಿ ಪಡೆದಿರುವ ಸಂಸ್ಥೆ ಬೇರಾರದ್ದು ಅಲ್ಲ ಅದು ವಸುಂಧರಾ ರಾಜೇ ಮಗ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಒಡೆತನದ ಸಂಸ್ಥೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಪತ್ತೆಯಾಗಿದೆ.

ವಿಚಾರಣೆಯಲ್ಲಿ ಪತ್ತೆಯಾದ ಅಂಶದ ಬಗ್ಗೆ ಜಾರಿ ನಿರ್ದೇಶನಾಲಯ ಹೇಳಿರುವಂತೆ, ಮಾರಿಶಸ್ ಮೂಲದ ವಿಲ್ಟನ್ ಇನ್ವೆಸ್ಟಮೆಂಟ್ ಲಿಮಿಟೆಡ್ ನಿಂದ ಲಲಿತ್ ಮೋದಿ ಒಡೆತನದ ಆನಂದ್ ಹೆರಿಟೇಜ್ ಹೋಟೆಲ್ಸ್ ಪ್ರೈ ಲಿ. ಸುಮಾರು 21 ಕೋಟಿ ರೂ. ಹಣ ಪಡೆದಿದೆ. ಈ ಹಣದಲ್ಲಿ ರಾಜೇ ಪುತ್ರ ದುಶ್ಯಂತ ಒಡೆತನದ ನಿಯಾಂತ್ ಹೆರಿಟೇಜ್ ಹೋಟೆಲ್ಸ್ ಪ್ರೈ ಲಿ.ಗೂ ಹಣ ವರ್ಗಾವಣೆಯಾಗಿದೆ ಎಂದು ವಿವರಿಸಿದೆ.

2008ರ ಏಪ್ರಿಲ್ ತಿಂಗಳಿನಲ್ಲಿ ಮೋದಿ ಅಸುರಕ್ಷಿತ ಸಾಲ ಎಂಬಂತೆ 3.80 ಕೋಟಿ ಹಣ ಪಡೆದಿದ್ದರು. ಬಳಿಕ ಮೋದಿ ದುಶ್ಯಂತ ಕಂಪನಿಯಿಂದ ಎರಡು ಕಂತುಗಳಲ್ಲಿ 815 ಷೇರುಗಳನ್ನು ಖರೀದಿಸಿದ್ದರು. ಹೀಗೆ ಸಾಲ ಮತ್ತು ಷೇರು ಖರೀದಿಗಾಗಿ ಲಲಿತ್ ಮೋದಿ ದುಶ್ಯಂತ್ ಕಂಪನಿಗೆ ಸುಮಾರು 11.63 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ್ದರು.

No Comments

Leave A Comment