Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಹೆಚ್.ಡಿಎಫ್.ಸಿ ಬ್ಯಾಂಕ್ ನಿಂದ 1 ಕೋಟಿ ರೂ ಮೌಲ್ಯದ ನಕಲಿ ನೋಟು ವಶ

HDFCಗುರ್ಗಾಂವ್: ಗುರ್ಗಾಂವ್ ನಲ್ಲಿ ಬೃಹತ್ ಮೊತ್ತದ ನಕಲಿ ನೋಟುಗಳು ಪತ್ತೆಯಾಗಿವೆ. 1 ಕೋಟಿ 4 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಕೇಂದ್ರದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬುದು ಅಚ್ಚರಿ ಮೂಡಿಸಿದೆ.

ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಸೆಕ್ಟರ್ 53 ಶಾಖೆಯಲ್ಲಿ ಈ ಬೃಹತ್ ಮೌಲ್ಯದ ಖೋಟಾ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಪೊಲೀಸ್ ಮಾಹಿತಿ ಪ್ರಕಾರ ಖೋಟಾ ನೋಟು ಪತ್ತೆಯಾಗಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಕಳೆದ ವರ್ಷ 100 ಹೆಚ್.ಡಿ.ಎಫ್.ಸಿ ಬ್ಯಾಂಕ್ ನಿಂದ ಹಣ ಸಂಗ್ರಹಿಸಿತ್ತು ಎಂದು ತಿಳಿದುಬಂದಿದೆ.

ಬ್ಯಾಂಕ್ ಕೇಂದ್ರದಲ್ಲಿರುವ ಹಣವನ್ನು ಪರೀಕ್ಷಿಸಿ ಎಣಿಕೆ ಮಾಡುವ ವೇಳೆಯಲ್ಲಿ ನಕಲಿ ನೋಟುಗಳು ಪತ್ತೆಯಾಗಿವೆ. ತಕ್ಷಣವೆ ಎಚ್ಚೆತ್ತ ಬ್ಯಾಂಕ್ ಮ್ಯಾನೇಜರ್, ಉಮೇಶ್ ಶರ್ಮಾ, ಸುಶಾಂತ್ ಲೋಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 489 -ಸಿ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. 1,04,76,000 ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಬ್ಯಾಂಕ್ ನ ಮ್ಯಾನೇಜರ್ ಪೊಲೀಸರಿಗೆ ನೀಡಿದ್ದಾರೆ.

No Comments

Leave A Comment