Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬಂಟಕಲ್ ಇಂಜಿನಿಯರಿಂಗ್ ಕಾಲೇಜು-ವಿದೇಶೀ ತಾಂತ್ರಿಕ ತಜ್ಞರ ನಿಯೋಗ ಭೇಟಿ

US_Deಬ೦ಟಕಲ್ಲು:ಅಮೇರಿಕಾದ ಶ್ರೇಷ್ಠ ಪ್ರಾಧ್ಯಾಪಕರ ಮತ್ತು ಉನ್ನತ ಸಂಶೋಧಕರ ನಿಯೋಗವೊಂದು ಉಡುಪಿಯ ಬಂಟಕಲ್ಲಿನಲ್ಲಿರುವ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಆಂಡ್ ಮ್ಯಾನೇಜ್‌ಮೆಂಟ್ (ಎಸ್.ಎಂ.ವಿ.ಐ.ಟಿ.ಎಂ.) ಸಂಸ್ಥೆಗೆ ೧೫ ಜೂನ್ ೨೦೧೫ರಂದು ಭೇಟಿ ಕೊಟ್ಟಿತು. ಕಾಲೇಜಿನಲ್ಲಿ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣಾ ಕೇಂದ್ರ (ಸಿಪಿ‌ಎ‌ಎಂ) ಮತ್ತು ಸಂವೇದಕ ಅಭಿವೃದ್ಧಿ ಮತ್ತು ಅನುಕಲನ ಕೇಂದ್ರ (ಸಿ‌ಎಸ್‌ಡಿ‌ಐ) ಎಂಬ ಎರಡು ಅಂತರ್ವಿಭಾಗೀಯ ಮಟ್ಟದ ಸೆಂಟರ್ ಆಫ್ ಎಕ್ಸೆಲೆನ್ಸ್ ಸ್ಥಾಪಿಸುವ ಬಗ್ಗೆ ವಿಸ್ತೃತವಾದ ಚರ್ಚೆಯನ್ನು ಕೈಗೊಂಡಿತು.

ಅಮೇರಿಕಾದ ನ್ಯೂಯಾರ್ಕಿನಲ್ಲಿರುವ ಪ್ರತಿಷ್ಠಿತ ರೋಚೆಸ್ಟರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಹಿರಿಯ ಪ್ರಾಧ್ಯಾಪಕರಾದ ಡಾ|ಪಿ ಆರ್ ಮುಕುಂದ್‌ರವರ ಮುಂದಾಳತ್ವದ ನಿಯೋಗದಲ್ಲಿ ಅದೇ ಸಂಸ್ಥೆಯ ಇಮೇಜಿಂಗ್ ಸೈನ್ಸ್ ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಡಾ| ರೋಜರ್ ಈಸ್ಟನ್, ಹವಾಯಿಯಲ್ಲಿರುವ ಬೋಯಿಂಗ್ ಕಂಪೆನಿಯ ನಿವೃತ್ತ ತಂತ್ರಜ್ಞರಾದ ಡಾ|ಕೀತ್ ನಾಕ್ಸ್, ನ್ಯೂಯಾರ್ಕಿನಲ್ಲಿರುವ ನ್ಯಾನೋ ಆರ್ಕ್ ಕಂಪೆನಿಯ ಹಿರಿಯ ಉಪಾಧ್ಯಕ್ಷರಾದ ಡಾ|ವಂದಿತಾ ಮುಕುಂದ್ ಮತ್ತು ಬೆಂಗಳೂರಿನಲ್ಲಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿಯ ಸಲಹೆಗಾರರಾದ ಶ್ರೀ ಸತೀಶ್ ಎಸ್ ಮುಂತಾದವರಿದ್ದರು.

ಪ್ರಸ್ತುತ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗದೊಂದಿಗೆ, ಭಾರತದ ಪ್ರಾಚೀನ ಪರಂಪರೆಗೆ ಪೂರಕವಾಗಿ ಎಸ್‌ಎಂವಿ‌ಐಟಿ‌ಎಂ ಸಂಸ್ಥೆಯನ್ನು ಬೆಳೆಸುವ ಮಹತ್ತ್ವದ ಕ್ರಿಯಾ ಯೋಜನೆ ರೂಪಿಸುವ ಸಲುವಾಗಿ ನಿಯೋಗದ ಭೇಟಿಯು ಆಯೋಜನೆಗೊಂಡಿತ್ತು. ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ಶ್ರೀ ರತ್ನಕುಮಾರ್, ಪ್ರತಿಷ್ಠಾನದ ಇತರ ಪದಾಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಮತ್ತು ಸಲಹೆಗಾರರು ಸಭೆಯಲ್ಲಿ ಪಾಲ್ಗೊಂಡಿದ್ದು, ಸಂಸ್ಥೆಯ ನಿರ್ದೇಶಕರಾದ ಪ್ರೊ|ಡಾ|ರಾಧಾಕೃಷ್ಣ ಎಸ್. ಐತಾಳ್‌ರವರು ಬೆಳೆಯುತ್ತಿರುವ ಸಂಸ್ಥೆಯಲ್ಲಿ ಆಸಕ್ತಿಯನ್ನು ತೋರ್ಪಡಿಸಿದ ಮತ್ತು ಒಂದು ಉದಾತ್ತ ಉದ್ದೇಶಕ್ಕೆ ಎಸ್.ಎಂ.ವಿ.ಐ.ಟಿ.ಎಂ.ನೊಂದಿಗೆ ಕೈಜೋಡಿಸಿದ ನಿಯೋಗದ ಸದಸ್ಯರಿಗೆ ಕೃತಜ್ಞತೆಯನ್ನು ಸಮರ್ಪಿಸಿದರು.

Foreign Delegation of Technical Experts Visits Bantakal Engineering College

A delegation of distinguished researchers and eminent professors from the USA visited Shri Madhwa Vadiraja Institute of Technology & Management (SMVITM), Bantakal, Udupi on 15 June 2015 and held detailed discussions with the college management on creating two interdisciplinary Centres of Excellence: Centre for the Preservation of Ancient Manuscripts (CPAM) and Centre for Sensor Development and Integration (CSDI).

The team, led by Prof. Dr. P. R. Mukund from the renowned Rochester Institute of Technology, New York (NY) USA, comprised Prof. Dr. Roger Easton, Centre for Imaging Science, RIT, NY; Dr. Keith Knox, Technical Fellow (Retd.), The Boeing Company, Hawaii; Dr. Vanditha Mukund, Sr. Vice President, NanoArk Corporation, NY and Sri S. Satish, Advisor, Karnataka Science & Technology Promotion Society (KSTePS), Bengaluru. The main objective of the meeting was preparations for developing SMVITM into a unique engineering institution that blends the knowledge of current science and technology with the wisdom of India’s past heritage and to come up with a strategic action plan for materialising these objectives. H.H. Shri Vishwavallabha Theertha Swamiji of Shri Sode Vadiraja Mutt, Udupi; Sri P Srinivasa Tantry and Sri Ratnakumar, members of Shri SodeVadiraja Mutt Education Trust and Governing Council of SMVITM were present on the occasion. The Director of the Institute, Prof. Dr. Radhakrishna S. Aithal thanked the delegation for showing their interest in the budding Institution and also for joining hands for the noble cause.

No Comments

Leave A Comment