Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸರಕಾರದ ನೆರವಿಗೆ ಕಾಯದೇ ಸ್ವಯಂಪ್ರೇರಿತವಾಗಿ ಜನಸೇವೆ ಮಾಡೋಣ: ಪ್ರಮೋದ್ ಮಧ್ವರಾಜ್

PRESS_NOTE_15.06.2015ಉಡುಪಿ:ಜನಸೇವೆ ಮಾಡಲು ಅಪಾರ ದುಡ್ಡಿನ ಅವಶ್ಯಕತೆ ಇಲ್ಲ. ಸೇವೆ ಮಾಡು ಮನಸ್ಸಿರಬೇಕು. ಪ್ರತಿ ಬಾರಿಯೂ ಸರಕಾರದ ನೆರವಿಗೆ ಕಾಯದೇ, ನಮ್ಮ ಸುತ್ತ ಮುತ್ತಲಿನವರಿಗೆ ಎಲ್ಲರ ಜತೆಗೂಡಿ ನೆರವು ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

ಇಂತಹ ಕೆಲಸವನ್ನು ನಿಟ್ಟೂರಿನ ಸುಜಯ ಪೂಜಾರಿಯವರು ಸಮಾನ ಮನಸ್ಕರೊಂದಿಗೆ ಸೇರಿ ಉತ್ತಮ ಸಮಾಜ ನಿರ್ಮಾಣದ ಕಾರ್ಯ ಮಾಡುತ್ತಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ನಿಟ್ಟೂರು ವಾರ್ಡ್ ಕಾಂಗ್ರೆಸ್ ಸಮಿತಿಯ ವತಿಯಿಂದ ನಿಟ್ಟೂರು ಹನುಮಂತ ನಗರದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಹೇಳಿದರು.

ನಗರಸಭಾಧ್ಯಕ್ಷರಾದ ಪಿ. ಯುವರಾಜ್ ಮಾತನಾಡುತ್ತಾ ಸುಜಯ ಪೂಜಾರಿಯವರಿಂದ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ಜರಗಲಿ ಎಂದು ಹಾರೈಸಿದರು.

ಒಂದನೇ ತರಗತಿಯಿಂದ ೭ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಐದರಿಂದ ಪಿಯುಸಿ ವರೆಗೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಐದರಿಂದ ಹತನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಸುಜಯ ಪೂಜಾರಿ ವಹಿಸಿದ್ದರು. ಸಭೆಯಲ್ಲಿ ಸಂಜೀವ ಜತ್ತನ್ನ, ಅಮ್ಮಣ್ಣಿ ಪಿ. ರಾಜೀವ ನಗರ, ದಿನೇಶ್ ಎಂ, ಸುರೇಂದ್ರ ಜತ್ತನ್ನ, ಸತೀಶ್ ಜತ್ತನ್ನ, ಶಿವರಾಮ ಸುವರ್ಣ, ಅರುಣ್, ಸತೀಶ್ ಎಂ., ನಾರಾಯಣ ಜತ್ತನ್ನ, ಮಹೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ಸುಲ್ತಾನ್ ಸಾಹೇಬ್ ಸ್ವಾಗತಿಸಿ, ಅಶೋಕ್ ಸನಿಲ್ ವಂದಿಸಿದರು.

No Comments

Leave A Comment