Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಡುಪಿ:ಕಣ್ಣಿನ ಮತ್ತು ಚರ್ಮರೋಗಗಳ ಬಗ್ಗೆ ಮಾಹಿತಿ ಮತ್ತು ತಪಾಸಣೆ ಕಾರ್ಯಾಗಾರ

IMG_8571ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ, ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಉಡುಪಿ ನಾಗರಿಕ ಆರೋಗ್ಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಜರುಗಿದ ‘ಕಣ್ಣಿನ ಮತ್ತು ಚರ್ಮರೋಗಗಳ ಬಗ್ಗೆ ಮಾಹಿತಿ ಮತ್ತು ತಪಾಸಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗರಿಕ ಆರೋಗ್ಯ ವೇದಿಕೆಯ ಗೌರವಾದ್ಯಕ್ಷ ಡಾ. ಆರ್ ಎನ್ ಭಟ್ ರೋಗದ ಕುರಿತಂತೆ ಎಚ್ಚರಿಕೆ, ಅದನ್ನು ನಿರ್ವಹಿಸುವ ವಿಧಾನ ಮತ್ತು ಎದುರಿಸುವ ಚಾಕಚಕ್ಯತೆಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಲು ಸಾಧ್ಯವೆಂದು ತಿಳಿಸಿದರು.

ಅಧ್ಯಕ್ಷ ಡಾ. ವಿರೂಪಾಕ್ಷ ದೇವರುಮನೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಆಸಕ್ತ ಸಂಘ ಸಂಸ್ಥೆಗಳೊಂದಿಗೆ ನಾಗರಿಕ ಆರೋಗ್ಯ ವೇದಿಕೆ ಪೂರ್ಣ ಸಹಕರಿಸುವುದಾಗಿ ತಿಳಿಸಿದರು.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಅದ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಮಹೇಶ್ ಭಂಡಾರಿ,ಕಾರ್ಯಕ್ರಮ ಸಂಘಟಕ ಹಾಗೂ ಕಾರ್ಯದರ್ಶಿ ಮಧುಸೂಧನ ಹೇರೂರು, ಪ್ರಧಾನ ಕಾರ್ಯದರ್ಶಿ ರವಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸಾದ್ ನೇತ್ರಾಲಯ ಉಡುಪಿಯ ಮಧುಕರ್ ಮತ್ತುಕೂ. ಸೌಮ್ಯ ಸಹಕರಿಸಿದರು ಹಾಗೂ ನೇತ್ರ ತಜ್ಞರಾದ ಡಾ. ಶಶಿದರ್ ಬಿ ಸಿ ಮತ್ತು ಕೆ ಎಮ್ ಸಿ ಮಣಿಪಾಲ ಚರ್ಮರೋಗ ವಿಭಾಗ ಡಾ. ಚರಿತ್ ಶೆಟ್ಟಿ ರೋಗಿಗಳನ್ನು ಪರೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಕ.ರಾ ಮಾರಾಟ ಮತ್ತು ವೈದ್ಯಕೀಯ ಪ್ರತಿನಿಧಿ ಸಂಘದ ವತಿಯಿಂದ ಉಚಿತ ಔಷಧಿಗಳನ್ನು ಒದಗಿಸಿ ಸಹಕರಿಸಿದರು.

ಮಹಿಳಾ ಗ್ರಾಹಕರ ಸಂಘದ ನಿರ್ದೇಶಕರಾದ ಶ್ರೀಮತಿ ಲೋವಿತಾ ಅಂದ್ರಾದೆ ಸ್ವಾಗತಿಸಿ ಶ್ರೀಮತಿ ಗಿರಿಜ ಶಿವರಾಮ ಶೆಟ್ಟಿ ಧನ್ಯವಾದ ನೀಡಿದರು.

No Comments

Leave A Comment