Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಏಕ ಶ್ರೇಣಿ – ಏಕ ಪಿಂಚಣಿಗಾಗಿ ಮಾಜಿ ಸೈನಿಕರ ಉಪವಾಸ ಸತ್ಯಾಗ್ರಹ ಶುರು

One-ಹೊಸದಿಲ್ಲಿ: ಏಕ ಶ್ರೇಣಿ – ಏಕ ಪಿಂಚಣಿ ಯೋಜನೆಯ ಅನುಷ್ಠಾನದಲ್ಲಿನ ವಿಳಂಬವನ್ನು ಪ್ರತಿಭಟಿಸಿ ನೂರಾರು ಮಾಜಿ ಸೈನಿಕರು ಸೋಮವಾರ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಸರಣಿ ಉಪವಾಸ  ಸತ್ಯಾಗ್ರಹವನ್ನು ಆರಂಭಿಸಿದರು.

ಭಾನುವಾರವೇ ನೂರಾರು ಮಾಜಿ ಸೈನಿಕರು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ ಅನುಷ್ಠಾನದಲ್ಲಿನ ವಿಳಂಬವನ್ನು ಪ್ರತಿಭಟಿಸಿ ಬೀದಿಗಿಳಿದಿದ್ದರು.

ಇಂದು ಜಂತರ್‌ ಮಂತರ್‌ನಲ್ಲಿ ಆರಂಭಿಸಲಾಗಿರುವ ಸರದಿ ನಿರಶನ ಸತ್ಯಾಗ್ರಹವನ್ನು ಭಾರತೀಯ ಮಾಜಿ ಸೈನಿಕರ ಆಂದೋಲನ ಸಂಘಟನೆ (ಐಇಎಸ್‌ಎಂ) ಆಯೋಜಿಸಿದೆ. ಕಳೆದ ವಾರವೇ ಮಾಜಿ ಸೈನಿಕರ ಈ ಸಂಘಟನೆಯು ಸರಕಾರವು ಏಕ ಶ್ರೇಣಿ – ಏಕ ಪಿಂಚಣಿ ಯೋಜನೆಯನ್ನು ಕೂಡಲೇ ಅನುಷ್ಠಾನಿಸದಿದ್ದರೆ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದೆಂಬ ಎಚ್ಚರಿಕೆಯನ್ನು ನೀಡಿತ್ತು.

ಈ ನಡುವೆ ಮಾಜಿ ಸೈನಿಕರು ತಮ್ಮ ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆಯನ್ನು ಸರಕಾರ ಕೂಡಲೇ ಪರಿಗಣಿಸಿ ಜಾರಿಗೆ ತರಬೇಕೆಂದು ಒತ್ತಾಯಿಸುವ ಮನವಿಗೆ ರಕ್ತದಲ್ಲಿ ಹಸ್ತಾಕ್ಷರ ಹಾಕಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದೆಂದು ಹೇಳಿದೆ.

ಈ ನಿಟ್ಟಿನಲ್ಲಿ ಈ ತನಕ ಸಂಘಟನೆಯು ತೆರೆಯ ಮುಂದೆ ಮತ್ತು ಹಿಂದೆ ಮಾಡಿರುವ ಎಲ್ಲ ಮಾತುಕತೆ ಯತ್ನಗಳು ವಿಫ‌ಲವಾಗಿವೆ. ಸರಕಾರ ಮಾಜಿ ಸೈನಿಕರ ಈ ಬೇಡಿಕೆಯನ್ನು ಮನ್ನಿಸುವುದಾಗಿ ಹೇಳಿತ್ತಾದರೂ ಅದರ ಈಡೇರಿಕೆಗೆ ಯಾವುದೇ ಕಾಲಮಿತಿಯನ್ನು ಒಪ್ಪಿರಲಿಲ್ಲ.
ಜೈಪುರದಲ್ಲಿ ನಿನ್ನೆಯಷ್ಟೇ ರಕ್ಷಣಾ ಸಚಿವ ಮನೋಹರ್‌ ಪರ್ರೀಕರ್‌ ಅವರು, “ಮಾಜಿ ಸೈನಿಕರ ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಸರಕಾರ ನಿಶ್ಚಿತವಾಗಿಯೂ ಪೂರೈಸುತ್ತದೆ. ಆದರೆ ಅಲ್ಲಿಯ ವರೆಗೆ ಅವರು ಸ್ವಲ್ಪ ಸಹನೆ ಹಾಗೂ ತಾಳ್ಮೆಯಿಂದ ಇರಬೇಕು’ ಎಂದು ಹೇಳಿದ್ದರು.

No Comments

Leave A Comment