Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಶಾಸಕ ಪ್ರಮೋದ್ ಮಧ್ವರಾಜ್‌ಗೆ ಬಂತು 5.80 ಕೋಟಿ ರೂ. ಕಾರು

shasakaಉಡುಪಿ: ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿದೇಶದಿಂದ ಖರೀದಿಸಿದ ಹೊಸ ಕಾರು ಎರಡು ದಿನಗಳಿಂದ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದರೆ, ಗುರುವಾರ ಟಿವಿ ಚಾನೆಲ್ ಮೂಲಕ ಸಾರ್ವಜನಿಕ ಚರ್ಚೆಗೀಡಾಗಿದೆ. ಮಲ್ಪೆಯ ಮೆ. ರಾಜ್ ಫಿಶ್‌ಮೀಲ್ ಆ್ಯಂಡ್ ಆಯಿಲ್ ಕಂಪನಿ ಹೆಸರಿಗೆ ಬಂದ ರೋಲ್ಸ್ ರಾಯ್ಸ್ ಘೋಸ್ಟ್ ಎಸ್‌ಡಬ್ಲ್ಯುಬಿ ಕಾರಿನ ಮೌಲ್ಯ 5.80 ಕೋಟಿ ರೂ. ಗಳಾಗಿದೆ. 

ವಿದೇಶದಲ್ಲಿ ಈ ಕಾರಿನ ಬೆಲೆ 1.66ಕೋಟಿ ರೂ., ಆಮದು ಸುಂಕ ಬರೋಬ್ಬರಿ 2.89ಕೋಟಿ ರೂ., ಸರಬರಾಜು ವಿಮೆ 10 ಲಕ್ಷ ರೂ., ನೋಂದಣಿಗೆ 90 ಲಕ್ಷ ರೂ., ಸೇವಾ ಶುಲ್ಕ 19 ಲಕ್ಷ ರೂ., ಸೇವಾ ತೆರಿಗೆ 2.66 ಲಕ್ಷ ರೂ., ಕಸ್ಟಮ್ಸ್ ಕ್ಲಿಯರೆನ್ಸ್ 2.22 ಲಕ್ಷ ರೂ. ಮೊತ್ತವನ್ನು ಕಾರು ಒಳಗೊಂಡಿದೆ. 

”ವಿದೇಶಿ ರೋಲ್ಸ್ ರಾಯ್ಸ್ ಕಾರು ಹೊಂದುವ ಆಸೆಯಿತ್ತು. ಪ್ರಾಮಾಣಿಕವಾಗಿ ದುಡಿದ ಹಣದಿಂದ ಕಾರು ಖರೀದಿಸಿದ್ದೇನೆ” ಎನ್ನುವ ಮೂಲಕ ವಿದೇಶಿ, ದುಬಾರಿ ಖರೀದಿ ಕುರಿತ ಪ್ರತಿಕ್ರಿಯೆಗಳಿಗೆ ಪ್ರಮೋದ್ ಮಧ್ವರಾಜ್ ಪ್ರತ್ಯುತ್ತರ ನೀಡಿದ್ದಾರೆ.

No Comments

Leave A Comment