Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಪಾಕ್, ಅಘ್ಘಾನ್ ಹಿಂದೂಗಳಿಗೆ ಭಾರತದ ನಾಗರಿಕತ್ವ ಕೊಟ್ಟ ಮೋದಿ ಸರ್ಕಾರ

Pakನವದೆಹಲಿ:ಮೊದಲ ಹೆಜ್ಜೆ ಎಂಬಂತೆ ನೆರೆ ದೇಶದ ನಿರಾಶ್ರಿತರಿಗೆ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನದ ಸುಮಾರು 4,300 ನಿರಾಶ್ರಿತ ಹಿಂದೂ ಹಾಗೂ ಸಿಖ್ ನಾಗರಿಕರಿಗೆ ಆಡಳಿತಾರೂಢ ಎನ್ ಡಿಎ ಸರ್ಕಾರ ಭಾರತದ ನಾಗರಿಕತ್ವ ನೀಡಿದೆ. ಯುಪಿಎ-II ಅವಧಿಯಲ್ಲಿ ಕೇವಲ 1023 ಮಂದಿಗೆ ಮಾತ್ರ ನಾಗರಿಕತ್ವ ನೀಡಿತ್ತು.

ಈ ನಿರಾಶ್ರಿತರಿಗೆ ಪ್ರಾಥಮಿಕವಾಗಿ ದೇಶದ ನಾಗರಿಕತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದು, ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಭಾರತ ಆಶ್ರಯ ನೀಡಲಿದೆ ಎಂಬ ಬಿಜೆಪಿ ನೀತಿಗೆ ಅನುಗುಣವಾಗಿ ಈ ಕ್ರಮ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಿ, ಬಾಂಗ್ಲಾದೇಶದ ನಿರಾಶ್ರಿತ ಹಿಂದುಗಳನ್ನು ಇತರೆ ಭಾರತೀಯ ಪ್ರಜೆಯಂತೆಯೇ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದರು. ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನದ ಸುಮಾರು 2 ಲಕ್ಷ ಹಿಂದು, ಸಿಖ್ ನಿರಾಶ್ರಿತರು ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ.

No Comments

Leave A Comment