Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಚೀನಾದಿಂದ ಪರಮಾಣು ವಾಹಕ ಪರೀಕ್ಷೆ

Chinaಬೀಜಿಂಗ್: ಪರಮಾಣು ಅಸ್ತ್ರಹೊಂದುವ ಕುರಿತು ವಿಶ್ವ ಸಮುದಾಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಚೀನಾ ಸರ್ಕಾರ ಪರಮಾಣು ಉಡಾವಣಾ ವಾಹಕವನ್ನು ಅಭಿವೃದ್ಧಿ ಪಡಿಸಿ ಪರೀಕ್ಷೆ ಕೂಡ ನಡೆಸಿದೆ.

ಚೀನಾದ ರಕ್ಷಣಾ ಇಲಾಖೆ ಅಭಿವೃದ್ಧಿ ಪಡಿಸಿರುವ ಪರಮಾಣು ಉಡಾವಣಾ ವಾಹಕವನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.  ಶಬ್ಧವೇಗವನ್ನೂ ಮೀರಿ ಕ್ಷಣಮಾತ್ರದಲ್ಲಿ ಕ್ರಮಿಸಬಲ್ಲ ಅತ್ಯಾಧುನಿಕ ಪರಮಾಣು ವಾಹಕ ಡಬ್ಲ್ಯೂ-14 ಉಡಾವಣಾ ವಾಹಕವನ್ನು ಚೀನಾ ಪರೀಕ್ಷೆ ನಡೆಸಿದೆ. ಈ ವಾಹಕ ಪರಮಾಣು ಸಿಡಿ ತಲೆಗಳನ್ನು ಹೊತ್ತು ಶಬ್ಧ ವೇಗಕ್ಕಿಂತ ಹತ್ತು ಪಟ್ಟು ವೇಗದಲ್ಲಿ ಸಾಗಿ ಪರಮಾಣು ಅಸ್ತ್ರಗಳನ್ನು ಕ್ಷಣಾರ್ಧದಲ್ಲಿ ಗುರಿಯತ್ತ ತಲುಪಿಸಬಲ್ಲದು. ಅಷ್ಟೆ ಅಲ್ಲ ಅಮೆರಿಕಾದ ಪ್ರಬಲ ಕ್ಷಿಪಣಿ ವ್ಯವಸ್ಥೆಯ ಕಣ್ತಪ್ಪಿಸಿ, ಸಂದರ್ಭಕ್ಕೆ ತಕ್ಕಂತೆ ವ್ಯೂಹಾತ್ಮಕ ಕಾರ್ಯಾಚರಣೆಗೆ ಹೊಂದಿಕೆಯಾಗುವ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಧಿಪತ್ಯಕ್ಕೆ ಎದುರಾಗಿರುವ ಅಮೆರಿಕಾದ ಕಾರ್ಯಾಚರಣೆಯನ್ನು ಗುರಿಯಾಗಿಟ್ಟುಕೊಂಡು ಚೀನಾ ಇಂತಹ ಅತ್ಯಾಧುನಿಕ ಪರಮಾಣು ವಾಹಕದ ಪರೀಕ್ಷೆಯನ್ನು ಮೂರನೇ ಬಾರಿಗೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಚೀನಾದ ಈ ಉದ್ದೇಶಿತ ಯೋಜನೆಯನ್ನು ಅಮೆರಿಕಾ ಗಂಭೀರವಾಗಿ ಪರಿಗಣಿಸಿವೆ.

ಯಾವ ದೇಶವನ್ನು ಗುರಿಯಾಗಿಸಿಕೊಂಡು ಯೋಜನೆ ಸಿದ್ಧ ಪಡಿಸಿಲ್ಲ

ಇನ್ನು ಚೀನಾ ಸರ್ಕಾರ ನಡೆಸಿದ ಪರಮಾಣು ವಾಹಕ ಪರೀಕ್ಷೆ ಕುರಿತಂತೆ ಹಾಂಗ್‌ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ವರದಿ ಮಾಡಿದ್ದು, ಚೀನಾ ಈ ಯೋಜನೆಯನ್ನು ಯಾವುದೇ ದೇಶವನ್ನು ಕೇಂದ್ರವಾಗಿಟ್ಟುಕೊಂಡು ತಯಾರಿಸಿಲ್ಲ ಎಂದು ಹೇಳಿದೆ. ಆದರೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ನ ವರದಿ ಕುರಿತಂತೆ ಚಕಾರ ಎತ್ತಿರುವ ರಕ್ಷಣಾ ತಜ್ಞರು ಮತ್ತು ವೀಕ್ಷಕರು, ದಕ್ಷಿಣ ಚೀನಾ ಸಮುದ್ರ ಸ್ವಾಮ್ಯ ಕುರಿತಂತೆ ಅಮೆರಿಕಾವನ್ನು ಗುರಿಯಾಗಿಟ್ಟುಕೊಂಡೇ ಚೀನಾ ಇದರ ಪರೀಕ್ಷೆ ನಡೆಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಂಟೆಗೆ 7680 ಕಿ.ಮೀ. ವೇಗದಲ್ಲಿ ಸಾಗಬಲ್ಲ ಈ ಪರಮಾಣು ವಾಹಕ ಅಸ್ತ್ರ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದಾಗಿದೆ ಎಂದು ಅಮೆರಿಕದ ಕೆಲ ಮಾಧ್ಯಮಗಳು ವರದಿ ಮಾಡಿವೆ.

No Comments

Leave A Comment