Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜಯಲಲಿತಾ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ ಟ್ರಾಫಿಕ್‌ ರಾಮಸ್ವಾಮಿ

Ramaswamyಚೆನ್ನೈ : ಜೂನ್‌ 27 ರಂದು ನಡೆಯುವ ತಮಿಳು ನಾಡಿನ ಆರ್‌.ಕೆ.ನಗರ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್‌ ರಾಮಸ್ವಾಮಿ ಅವರು ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಭಾನುವಾರ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಪೊಲೀಸರು,ಚುನಾವಣಾ ಆಯೋಗ ಸೇರಿದಂತೆ ಎಲ್ಲರೂ ಜಯಲಲಿತಾ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಐಎಡಿಎಂಕೆಯ ಮುಖವಾಣಿ  ‘ನಮತು ಎಂಜಿಆರ್‌’ ನಲ್ಲಿ ತನ್ನ ವಿರುದ್ದ ಪ್ರಕಟವಾಗಿರುವ ಲೇಖನದ ಬಗ್ಗೆ ಶನಿವಾರ ಸಂಜೆ ನಾನು ನೀಡಿದ ದೂರು ದಾಖಲಿಸಿಕೊಳ್ಳಲು  ಪೊಲೀಸರು ನಿರಾಕರಿಸಿದ್ದಾರೆ’ ಎಂದು ರಾಮಸ್ವಾಮಿ ಅರೋಪಿದ್ದಾರೆ.

ಜಯಲಲಿತಾ ಮತ್ತು ನಾಲ್ವರ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಬೇಕೆಂದು 82 ರ ಹರೆಯದ ರಾಮಸ್ವಾಮಿ ಪೊಲೀಸರಿಗೆ ಆಗ್ರಹಿಸಿದ್ದಾರೆ.

ಶನಿವಾರ ಸಂಜೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ ಬೆನ್ನಲ್ಲೇ ರಾಮಸ್ವಾಮಿ ಅವರು ಗ್ಯುಂಡಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು ,ಈ ವೇಳೆ ನೂರಾರು ಮಾಧ್ಯಮದವರು ಸೇರಿದ್ದರು.

ಸಾಮಾಜಿಕ ಹೋರಾಟಗಾರ ರಾಗಿರುವ ರಾಮಸ್ವಾಮಿ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಕೋರ್ಟ್ ಮೆಟ್ಟಿಲೇರಿ  ವಕೀಲರ ಹಂಗಿಲ್ಲದೆ ಸ್ವಯಂ ವಾದ ಮಂಡಿಸಿ ಜನಪ್ರಿಯ ರಾಗಿದ್ದಾರೆ.  ಚೆನ್ನೈ ನಗರದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ  ಸ್ವಯಂ ಪ್ರೇರಣೆಯಿಂದ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೆಲಸ ಮಾಡಿದ್ದಕ್ಕೆ  ಪೊಲೀಸ್ ಇಲಾಖೆ ಅವರಿಗೆ ಟ್ರಾಫಿಕ್‌ ರಾಮಸ್ವಾಮಿ ಎಂಬ ಬಿರುದು ನೀಡಿದೆ.

No Comments

Leave A Comment