Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ದಿಲ್ಲಿ ಸ್ವಚ್ಛಗೊಳಿಸಲು ಆಪ್‌ ಸಾಥ್

delhiaapಹೊಸದಿಲ್ಲಿ: ವೇತನಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೌರ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದ ಮಾರನೇ ದಿನವಾದ ಶನಿವಾರ ನಗರ ಸ್ವಚ್ಛತಾ ಅಭಿಯಾನದಲ್ಲಿ ಎಎಪಿ ನಾಯಕರು ಪಾಲ್ಗೊಂಡಿದ್ದರು.

ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಎಎಪಿ ಮುಖಂಡರಾದ ಸಂಜಯ್ ಸಿಂಗ್, ಅಸುತೋಷ್ ಮತ್ತು ಅಲ್ಕಾ ಲಂಬಾ ಶನಿವಾರ ಬೆಳಗ್ಗೆ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಕರೆ ನೀಡಿದಾಗ ನಾವೆಲ್ಲರೂ ಕೈ ಜೋಡಿಸಿದ್ದೆವು. ದಿಲ್ಲಿ ಜನತೆ ಕಷ್ಟಕ್ಕೊಳಗಾಗದಂತೆ ದಿಲ್ಲಿ ನಗರ ಪಾಲಿಕೆ ಮೇಯರ್‌ಗಳು ಸಹಕರಿಸಬೇಕು’, ಎಂದು ಸಂಜಯ್ ಸಿಂಗ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೇಯರ್ ಮತ್ತು ದಿಲ್ಲಿ ಮುಖ್ಯಮಂತ್ರಿ ಪ್ರಧಾನಿಯನ್ನು ಭೇಟಿಯಾಗಿ ದಿಲ್ಲಿ ಪಾಲಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ಸಿಂಗ್ ತಿಳಿಸಿದ್ದಾರೆ.

No Comments

Leave A Comment