Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಎಡಿಸಿ ಅಭಿಮತ- ‘ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕ’

udupi13ಉಡುಪಿ: ‘ಬಾಲಕಾರ್ಮಿಕ ಪದ್ಧತಿಯು ಸಮಾಜಕ್ಕೆ ಮಾರಕವಾಗಿದ್ದು, ಇದನ್ನು ನಿರ್ಮೂಲನೆ ಮಾಡದಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲಾಗದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಬ್ರಹ್ಮಗಿರಿಯ ಐಎಂಎ ಭವನ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ, ಸಾರ್ವಂಗೀಣ ಅಭಿವೃದ್ಧಿಯನ್ನು ಬಾಲಕಾ ರ್ಮಿಕ ಪದ್ಧತಿ ಹತ್ತಿಕ್ಕುತ್ತಿದೆ. ಸಾಮಾಜಿಕ ಹಿನ್ನೆಲೆ, ಬಡತನ, ಅನಕ್ಷರತೆ ಈ ಎಲ್ಲ ಕಾರಣದಿಂದಾಗಿ ಬಾಲಕಾರ್ಮಿಕರು ಸೃಷ್ಟಿಯಾಗುತ್ತಿದ್ದಾರೆ. ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತಂದು ಒಳ್ಳೆಯ ಶಿಕ್ಷಣ ಕೊಟ್ಟು ಬೆಳೆಸಬೇಕು ಎಂದರು.

ಇಂದು ಮಾನವೀಯ ಸಂಬಂಧ ಗಳನ್ನು ಆರ್ಥಿಕತೆ, ಲಾಭ, ವ್ಯಾಪಾರೀ ಕರಣ ಮನೋಭಾವದಿಂದ ನೋಡಲಾ ಗುತ್ತಿದೆ. ಇದನ್ನು ಬದಲಾಯಿಸಿ ಮಾನ ವೀಯ ನೆಲೆಯಲ್ಲಿ ಪ್ರೀತಿ, ಸಹೋದರತೆ, ಸಾಮರಸ್ಯ, ಸಹಬಾಳ್ವೆಯ ದೃಷ್ಟಿಕೋನ ದಿಂದ ನೋಡಿದಾಗ ಬಾಲಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್‌.ಪಿ. ಜ್ಞಾನೇಶ್‌ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ಸರ್ಕಾರ ಕಟಿಬದ್ಧವಾಗಿದ್ದು, ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ಬಾಲಕಾ ರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಕರ್ನಾಟಕವನ್ನು ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.    ಸಂಸ್ಥೆ ಗಳನ್ನು ತಪಾಸಣೆ ಮಾಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಂಖ್ಯೆ ಕಡಿಮೆಯಾ ಗಿದೆ. ಜಿಲ್ಲೆಯಲ್ಲಿ 14 ಬಾಲಕಾರ್ಮಿ ಕರನ್ನು ಪತ್ತೆಮಾಡಿ, ಅದರಲ್ಲಿ 3 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾ ಗಿದೆ. ಉಳಿದ 11 ಮಕ್ಕಳನ್ನು ಸ್ಫೂರ್ತಿಧಾ   ಮಕ್ಕೆ ಸೇರಿಸಿ, ಅವರಿಗೆ ಪುನರ್ವಸತಿ ಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

No Comments

Leave A Comment