Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮಂಗಳೂರಿನಲ್ಲಿ ಭಯಾನಕ ಅಂಟು ರೋಗ ಪತ್ತೆ-ಮಾರಕ ಎಂಆರ್ ಎಸ್ ಎ ರೋಗಾಣು ಪತ್ತೆ,ವಿದ್ಯಾರ್ಥಿಗಳ ಪ್ರತಿಭಟನೆ

78ಮಂಗಳೂರು : ನಗರದ ಬಲ್ಮಠದಲ್ಲಿರುವ ಲಕ್ಷ್ಮೀ ಮೆಮೋರಿಯಲ್‌ ನರ್ಸಿಂಗ್‌ ಕಾಲೇಜಿನ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಮಾರಕ ಎಂಆರ್‌ಎಸ್‌ಎ (Methicillin-resistant Staphylococcus aureus )ರೋಗಾಣು ಪತ್ತೆಯಾಗಿದ್ದು, ಈ ವಿಷಯ ತಿಳಿದಿದ್ದರೂ ಆಡಳಿತ ಮಂಡಳಿ ಮುಚ್ಚಿಟ್ಟಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ರೋಗಾಣು ಪತ್ತೆಯಾದರೂ ಕಾಲೇಜಿನ ಆಡಳಿತ ಮಂಡಳಿ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಕಾಯಿಲೆಗೆ ತುತ್ತಾಗಿರುವವರನ್ನು ಪ್ರತ್ಯೇಕಿಸದೆ ವಿಷಯ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ  ವಿದ್ಯಾರ್ಥಿನಿಯರು ಶನಿವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.nm

ಕಾಲೇಜಿನ ಆಡಳಿತ ಮಂಡಳಿ ಎಂಆರ್‌ಎಸ್‌ಎ ಪತ್ತೆಯಾದವರಿಗೆ ರಜೆ ನೀಡದೆ ಉಳಿದ ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕಾಲೇಜಿನಲ್ಲಿ ರುವ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನವರು ಕೇರಳ ಮೂಲದವರಾಗಿದ್ದಾರೆ. ಕೊಯಿಕ್ಕೋಡ್‌ ನಲ್ಲಿ ಈಗಾಗಲೇ ಎಂಆರ್‌ ಎಸ್‌ಎ ಮಾರಕರೋಗವಿರುವುದು ಧೃಡ ಪಟ್ಟಿದ್ದು, ಅಲ್ಲಿಂದಲೆ ಬಂದ ವಿದ್ಯಾರ್ಥಿಗಳಿಂದ ರೋಗ ಹರಡುತ್ತಿದೆ ಎಂದು ಹೇಳಲಾಗಿದೆ. ರೋಗಕ್ಕೆ ತುತ್ತಾದವರ ವಿದ್ಯಾರ್ಥಿಗಳ ಸ್ಥಿತಿಗತಿಯ ಬಗ್ಗೇ ಇನ್ನಷ್ಟೆ ತಿಳಿದು ಬರಬೇಕಿದೆ.

ಎಂಆರ್‌ಎಸ್‌ಎ ಮಾರಕ (ಬ್ಯಾಕ್ಟಿರಿಯಾದಿಂದ ಹರಡುವ ಮೆರ್ಸ್ ರೋಗ)ರೋಗವಾಗಿದ್ದು, ಹೆಚ್ಚಾಗಿ ಯುರೋಪ್‌ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ.  ಗಾಳಿಯಿಂದ ಹರಡುವ ಮಾರಕ ಚರ್ಮ ರೋಗವಾಗಿದ್ದು, ಪ್ರಾಥಮಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ರೋಗಿ ಸಾವನ್ನಪ್ಪುವುದು ಖಚಿತ.

 

 

No Comments

Leave A Comment