Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ನಾಲ್ವರಿಗೆ ಕೇಂದ್ರ ಅಕಾಡೆಮಿ ಗೌರವ

Sathyu_Akshara_-Manjunath-Bನವದೆಹಲಿ: ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು, ರಂಗಕರ್ಮಿಗಳಾದ ಅಕ್ಷರ ಕೆ.ವಿ., ಚಿದಂಬರ ರಾವ್ ಜಂಬೆ, ಯಕ್ಷಗಾನ ಕಲಾವಿದ ಮಂಜುನಾಥ ಭಾಗವತ ಹೊಸ್ತೋಟ ಅವರಿಗೆ 2014ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಫೆಲೋಶಿಪ್ ಪ್ರಕಟಿಸಲಾಗಿದೆ. ಜೂ.10ರಂದು ನಡೆದ ಸಾಮಾನ್ಯ ಮಂಡಳಿ (ಜನರಲ್ ಕೌನ್ಸಿಲ್)ಯಲ್ಲಿ ಫೆಲೋಶಿಪ್ ನೀಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಪ್ರಸಕ್ತ ಸಾಲಿನಲ್ಲಿ ಸಂಗೀತ, ನಾಟಕ ಮತ್ತು ಗೊಂಬೆಯಾಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 36 ಮಂದಿ ಗಣ್ಯರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಅಶ್ವಿನಿ ಭಿಡೆ ದೇಶಪಾಂಡೆ, ಉಸ್ತಾದ್ ಇಕ್ಬಾಲ್ ಅಹ್ಮದ್ ಖಾನ್ ಮತ್ತು ನಾಥ್ ನರಲೇಕರ್ ಅವರನ್ನು ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಗೌರವ ನೀಡಲಾಗಿದೆ. ರೋಣು ಮಜುಂದಾರ್ (ಕೊಳಲುವಾದನ) ಮತ್ತು ಪಂಡಿತ್ ನಯನ್ ಘೋಷ್ (ವಯೋಲಿನ್)ಗೂ ಈ ಸಮ್ಮಾನ ಸಂದಿದೆ. ನಾಟಕ ಕ್ಷೇತ್ರದಲ್ಲಿ ಜಂಬೆ ಸೇರಿದಂತೆ 8 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಅಸ್ಗರ್ ವಜಾಹತ್, ಸೂರ್ಯ ಮೋಹನ ಕುಲಶ್ರೇಷ್ಠ, ರಾಮದಾಸ ಕಾಮತ್, ಅಮೋದ್ ಭಟ್ ಪ್ರಮುಖರು ಅಕ್ಷರ ಕೆ.ವಿ ಮತ್ತು ಸಂಗೀತಗಾರ ಇಂದೂಧರ್ ನಿರೋಡಿ ಅವರು ಪ್ರದರ್ಶನಕಲೆಗೆ ಸಂಬಂಧಿಸಿದ ಜೀವಮಾನದ ಸಾಧನೆಗಾಗಿ 2014ನೇ ಸಾಲಿನ ಅಕಾಡೆಮಿ ಗೌರವ ಪಡೆಯಲಿದ್ದಾರೆ.

ಸಾಂಪ್ರದಾಯಿಕ, ಜಾನಪದ, ಗೊಂಬೆಯಾಟ ಕ್ಷೇತ್ರದಲ್ಲಿ ಪುರಾನ್ ಶಾ ಕೋಟಿ,  ಕೆ.ಕೇಶವಸ್ವಾಮಿ, ಕಮಲಮಂಡಲಂ ರಾಮ್ ಮೋಹನ್, ರೆಬಾಕಾಂತ್ ಮೊಹಾಂತ, ಅಬ್ದುಲ್ ರಶೀದ್ ಹಫೀಜ್, ಕೆ.ಶನತೋಬಿಯಾ ಶರ್ಮಾ , ರಾಮ್ ದಯಾಳ್ ಶರ್ಮಾ  ಮತ್ತು ತಾಂಗಾ ದಾರ್ಲೊಂಗ್ ಫೆಲೋಶಿಪ್ ಪಡೆಯಲಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಅಡ್ಯಾರ್ ಜನಾರ್ದನ್ (ಭರತನಾಟ್ಯ), ಉಮಾ ದೋಗ್ರಾ (ಕಥಕ್), ಅಮುಸಾನಾ ದೇವಿ (ಮಣಿಪುರಿ), ವೇದಾಂತಂ ರಾಧೇಶ್ಯಾಮ್  (ಕೂಚಿಪುಡಿ), ಸುಧಾಕರ ಸಾಹೂ (ಒಡಿಸ್ಸಿ), ಅನಿತಾ ಶರ್ಮಾ (ಸತ್ತಾರಿಯಾ), ಜಗ್ರೂ ಮಹಾತೋ (ಚಾಹು), ನವ್ ತೇಜ್ ಸಿಂಗ್ ಜೋಹರ್ (ಸಮನಾಂತರ ನೃತ್ಯ) ಮತ್ತು ವಾರಾಣಸಿ ವಿಷ್ಣು ನಂಬೂದಿರಿ (ಕಥಕ್ಕಳಿ ಸಂಗೀತ) ನೈವೇಲಿ ಸಂತಾನಗೋಪಾಲಂ (ಕರ್ನಾಟಕಿ), ಟಿ.ಕೆ.ಕಲಿಯಾ ಮೂರ್ತಿ (ತವಿಲ್), ಸುಕನ್ಯಾ ರಾಮ್ ಗೋಪಾಲ್ (ಘಟಂ), ದವರಂ ದುರ್ಗಾಪ್ರಸಾದ್ ರಾವ್ (ಕರ್ನಾಟಕ ಶಾಸ್ತ್ರೀಯ ವಯೋಲಿನ್) ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಗೌರವ ನೀಡಲು ಅಕಾಡೆಮಿ ನಿರ್ಧರಿಸಿದೆ. ಅಕಾಡೆಮಿ ಫೆಲೋಶಿಪ್ ಪಡೆದವರಿಗೆ ರು. 3 ಲಕ್ಷ ಮತ್ತು ಅಕಾಡೆಮಿ ಪ್ರಶಸ್ತಿಪಡೆದವರಿಗೆ ರು.1 ಲಕ್ಷ ನಗದು ನೀಡಲಾಗುತ್ತದೆ

No Comments

Leave A Comment