Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ರಾಜಸ್ಥಾನ ದುರಂತ: ಬಸ್‌ ಮೇಲೆ ಹೈಟೆನ್ಶನ್‌ ವೈರ್‌ ಬಿದ್ದು 15 ಸಾವು

ಜೈಪುರ: ಚಲಿಸುತ್ತಿದ್ದ ಬಸ್‌ ಮೇಲೆ ಹೈಟೆನ್ಶನ್‌ ವೈರ್‌ ತುಂಡಾಗಿ ಬಿದಿದ್ದರಿಂದ ಇಡೀ ಬಸ್‌ಗೆ ವಿದ್ಯುತ್‌ ತಗುಲಿ 15 ಮಂದಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಘಟನೆ ಶುಕ್ರವಾರ ಮಧ್ಯಾಹ್ನ ರಾಜಸ್ಥಾನದ ಟೋಂಕ್‌ ಜಿಲ್ಲೆಯಲ್ಲಿ ಸಂಭವಿಸಿದೆ.

ಟೋಂಕ್‌ ಜಿಲ್ಲೆಯ ಬಸೇಡಾ ಎಂಬಲ್ಲಿಂದ ಮೋರ್ಲಾ ಎಂಬ ಗ್ರಾಮಕ್ಕೆ ಮದುವೆ ದಿಬ್ಬಣ ದ ಈ ಖಾಸಗಿ ಬಸ್ಸು ತೆರಳುತ್ತಿತ್ತು. ಬಸ್ಸಿನಲ್ಲಿ 41 ಜನರಿದ್ದರು. ಈ ವೇಳೆ ಪಚೇವಾರ್‌ ಎಂಬಲ್ಲಿ ಹೈಟೆನ್ಶನ್‌ ವಿದ್ಯುತ್‌ ತಂತಿಯೊಂದು ತುಂಡರಿಸಿ ಬಸ್ಸಿನ ಮೇಲೆ ಬಿದ್ದಿದೆ. ತಕ್ಷಣ ಬಸ್‌ಗೆವಿದ್ಯುತ್‌ ತಗುಲಿ ಪ್ರಯಾಣಿಕರು ಚೀರಾಡಿದ್ದಾರೆ. ಇದನ್ನು ಕೇಳಿ ತಕ್ಷಣವೇ ಸುತ್ತಲಿನ ಜನ ಸ್ಥಳಕ್ಕೆ ಧಾವಿಸಿ, ಮರದ ತುಂಡುಗಳಿಂದ ವಿದ್ಯುತ್‌ ತಂತಿಯನ್ನು ಬದಿಗೆ ಸರಿಸಿ ಬಸ್‌ನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಿದ್ದಾರೆ.

ಆದರೆ 15 ಜನ ಮಾರ್ಗಮಧ್ಯದಲ್ಲಿಯೇ ಅಸುನೀಗಿದ್ದಾರೆ. ಘಟನೆಯಲ್ಲಿ 26 ಜನರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನತದೃಷ್ಟ ವಾಹನದಲ್ಲಿ ವರ ಇರಲಿಲ್ಲ. ಆತ ಕುಟುಂಬ ಸದಸ್ಯರೊಂದಿಗೆ ಬೇರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ, ತೊಂದರೆ ಇಲ್ಲದೇ ಪಾರಾಗಿದ್ದಾನೆ.

ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ರಾಜೇ ಅವರು ಸ್ಥಳಕ್ಕೆ ನಾಲ್ವರು ಸಚಿವರ ತಂಡ, ವೈದ್ಯರ ತಂಡವನ್ನು ಕಳುಹಿಸಿದ್ದಾರೆ. ಜತೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ, ಸಣ್ಣಪುಟ್ಟ ಗಾಯವಾದವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಎಲ್ಲಿ?

ರಾಜಸ್ಥಾನದ ಟೋಂಕ್‌ ಜಿಲ್ಲೆಯ ಪಚೇವಾಲ್‌ ಗ್ರಾಮದ ಸಮೀಪ

ಏನಾಯ್ತು?

ಖಾಸಗಿ ಬಸ್‌ನಲ್ಲಿ ಬಸೇಡಾ ಎಂಬಲ್ಲಿಂದ ಮೋರ್ಲಾ ಎಂಬ ಗ್ರಾಮಕ್ಕೆ ಮದುವೆ ದಿಬ್ಬಣ ತೆರಳುತ್ತಿ ತ್ತು. ಪಚೇವಾರ್‌ ಎಂಬಲ್ಲಿ ಹೈಟೆನ್ಶನ್‌ ವಿದ್ಯುತ್‌ ತಂತಿ ಯೊಂದು ತುಂಡರಿಸಿ ಬಸ್‌ ಮೇಲೆ ಬಿತ್ತು. ತಕ್ಷಣ ಬಸ್‌ಗೆ ವಿದ್ಯುತ್‌ ತಗುಲಿ 15 ಮಂದಿ ಸಾವನ್ನಪ್ಪಿದರು.

No Comments

Leave A Comment