Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಲುಧಿಯಾನದಲ್ಲಿ ಅಮೋನಿಯಾ ಟ್ಯಾಂಕರ್ ಅನಿಲ ಸೋರಿಕೆ: 8ಸಾವು, ನೂರಕ್ಕೂ ಹೆಚ್ಚು ಜನಕ್ಕೆ ಗಾಯ/Eight dead in ammonia gas tanker leak near Ludhiana

ammoniagasleakldh

At least eight people were killed and over 1500 affected in ammonia gas tanker leak in Ludhiana, Punjab early Saturday morning.

The leak occurred when the tanker got stuck under a flyover on the Doraha Bypass Road along a canal.

People living in the 5 km radius of the spot have been evacuated.

Two NDRF teams have already reached the spot while other two are on the way. Affected people have been rushed to the hospital.

ಲುಧಿಯಾನ: ಇಂದು ಮುಂಜಾನೆ ಲುಧಿಯಾನ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಮೋನಿಯಾ ಅನಿಲ ಟ್ಯಾಂಕರ್ ಸೋರಿಕೆಯಾಗಿ ಕನಿಷ್ಠ 8ಜನ ಮೃತಪಟ್ಟು ೧೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲುಧಿಯಾನದಿಂದ ೨೫ ಕಿ ಮೀ ದೂರದಲ್ಲಿರುವ ದೊರಾಹ ಬೈಪಾಸ್ ರಸ್ತೆಯಲ್ಲಿನ ಮೇಲು ಸೇತುವೆಗೆ ಟ್ಯಾಂಕರ್ ಢಿಕ್ಕಿ ಹೊಡೆದು ಸಿಕ್ಕಿಹಾಕಿಕೊಂಡದ್ದರಿಂದ ಈ ಅನಿಲಸೋರಿಕೆ ಉಂಟಾಗಿದೆ. ಈ ಅನಿಲವನ್ನು ಒಳತೆಗೆದುಕೊಂಡು ಆರು ಜನ ಮೃತಪಟ್ಟಿದ್ದಾರೆ ಮತ್ತು ದೇಹಗಳನ್ನು ಲುಧಿಯಾನಾದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ದೊರಾಹ ಪೊಲೀಸ್ ಠಾಣೆಯ ಅಧಿಕಾರಿ ರಜನೀಶ್ ಕುಮಾರ್ ಸೂದ್ ತಿಳಿಸಿದ್ದಾರೆ.

ಈ ಅನಿಲವನ್ನು ಉಸಿರಾಡಿ ೧೦೦ಕ್ಕೂ ಹೆಚ್ಚು ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದಾಗಿ ದೂರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದೊರಾಹಾದ ಸುತ್ತ ಮುತ್ತ ಅನಿಲ ಹರಡಿದಾಗ ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.

ಉಸಿರಾಟದ ತೊಂದರೆಗೆ ಒಳಗಾದ ಜನರನ್ನು ದೊರಾಹ, ಖನ್ನ ಮತ್ತು ಲುಧಿಯಾನಾದ ವಿವಿಧ ಆಸ್ಪತ್ರೆಗೆ ಸೇರಿಸಲಾಗಿದೆ ಮತ್ತು ಹಳ್ಳಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗುಜರಾತಿನ ನೊಂದಣಿ ಸಂಖ್ಯೆ ಹೊಂದಿರುವ ಟ್ಯಾಂಕರ್ ಲುಧಿಯಾನದತ್ತ ತೆರಳುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಇನ್ನು ಹೆಚ್ಚಿನ ವಿವರಗಳು ತಿಳಿಯಬೇಕಿದ್ದು, ಸಂತ್ರಸ್ತರ ಗುರುತುಗಳನ್ನು ಪತ್ತೆ ಹಚ್ಚಬೇಕಿದೆ ಎಂದು ಅವರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ.

No Comments

Leave A Comment