Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ನಿವೃತ್ತ ಐಎಎಸ್ ಅಧಿಕಾರಿ ಪತ್ನಿಗೆ ಫೇಸ್ ಬುಕ್ ನಲ್ಲಿ 11 ಲಕ್ಷ ರೂಪಾಯಿ ವಂಚನೆ!

faceತಿರುವನಂತಪುರಂ: ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿಯೊಂದಿಗೆ ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದ ವ್ಯಕ್ತಿ, ಆಕೆಯಿಂದ 11 ಲಕ್ಷ  ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನೊಂದಿಗೆ ಚಾಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನಿಂದ 11 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾನೆ ಎಂದು ದೆಹಲಿ ಮೂಲದ, ನಿವೃತ್ತ,  ದಿ. ಐಎಎಸ್ ಅಧಿಕಾರಿಯ ಪತ್ನಿ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಒಂಟಿಯಾಗಿರುತ್ತಿದ್ದ ವಂಚನೆಗೊಳಗಾದ ಮಹಿಳೆ, ತನ್ನ ಸ್ನೇಹಿತರೊಂದಿಗೆ ಫೇಸ್ ಬುಕ್  ಸೇರಿದಂತೆ ಹಲವು ಸಾಮಾಜಿಕ  ಜಾಲತಾಣಗಳಲ್ಲಿ ಚಾಟ್ ಮಾಡುತ್ತಿದ್ದರು. ಲಂಡನ್ ಮೂಲದ ಜಾನ್ ಕೆನಡಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ  ಚಾಟ್ ಮಾಡಲು ಪ್ರಾರಂಭಿಸಿದ್ದಾನೆ, ಒಂದು ವಾರದ  ಗೆಳೆತನದ ಬಳಿಕ  ವಂಚಕ ಆಕೆಗಾಗಿ ಭಾರತದಲ್ಲಿ ಒಂದು ಮನೆಯನ್ನು ಖರೀದಿಸುವುದಾಗಿ  ತಿಳಿಸಿದ್ದಾನೆ. ಪ್ರಾರಂಭದಲ್ಲಿ ವಿದೇಶಿ ಸ್ನೇಹಿತನ ಮನವಿಯನ್ನು ತಿರಸ್ಕರಿಸಿದರಾದರೂ, ಒತ್ತಾಯಿಸಿದ್ದರಿಂದ ಒಪ್ಪಿಕೊಂಡಿದ್ದಾರೆ.

ನಂತರ ತಾನು ಭಾರತಕ್ಕೆ ಬಂದಿದ್ದು ಬೃಹತ್ ಮೊತ್ತದ ಹಣ ತಂದಿರುವುದಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಡುಗಡೆಯಾಗಲು 75 ,000 ರೂಪಾಯಿ ಕಳಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಪತ್ನಿಯನ್ನು ಕೇಳಿದ್ದಾನೆ. ಇದಾದ ಬಳಿಕ ಹಲವು ಬಾರಿ ಹಣ ಪಡೆಯುತ್ತಿದ್ದರಿಂದ, ಅನುಮಾನಗೊಂಡು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸೈಬರ್ ಕ್ರೈಮ್ ಇಲಾಖೆ ಅಧಿಕಾರಿ ಟಿ.ಶ್ಯಾಮ್ ಲಾಲ್ ತಿಳಿಸಿದ್ದಾರೆ. ವಂಚಕ ಮಹಿಳೆಗೆ ಮೂರು ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿದ್ದು, ನವದೆಹಲಿಯ ಉತ್ತಂ ನಗರದಿಂದ ನೆಟ್ವರ್ಕ್ ಪತ್ತೆಯಾಗಿದೆ.

No Comments

Leave A Comment