Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕರೇಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಶಾರುಖ್ ಖಾನ್

sharukh_khanಮುಂಬೈ: ಬಾಲಿವುಡ್‌ನ ಕಿಂಗ್, ಐಪಿಎಲ್ ಟೀಂ ಕೊಲ್ಕತ್ತಾ ನೈಟ್ ರೈಡರ್ಸ್‌ನ ಮಾಲೀಕ ಶಾರುಖ್ ಖಾನ್ ಈಗ ಕರೇಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲಿ ಟ್ರೀನಿಡಾಡ್ ಆ್ಯಂಡ್ ಟ್ಯುಬಾಗೋ ಟೀಂನ್ನು ಖರೀದಿಸಿದ್ದಾರೆ.

ಖ್ಯಾತ ಹಾಲಿವುಡ್ ನಟರಾದ  ಮಾರ್ಕ್ ವಾಲ್ಹ್‌ಬರ್ಗ್ ಮತ್ತು ಗೆರಾರ್ರ್ಡ್ ಬಟ್ಲರ್ ಕೂಡಾ ಸಿಪಿಎಲ್ ನಲ್ಲಿ ತಂಡಗಳನ್ನು ಖರೀದಿಸಿದ್ದು, ಸಿಪಿಎಲ್ ಮಾಲೀಕರ ತಂಡಕ್ಕೆ ಶಾರುಖ್ ಹೊಸ ಸೇರ್ಪಡೆಯಾಗಿದ್ದಾರೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಆಗಿದೆ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್. 8 ಐಪಿಎಲ್ ಆವೃತ್ತಿಗಳಲ್ಲಿ 2 ಬಾರಿ ಚಾಂಪಿಯನ್ ಆಗಿರುವ ಈ ತಂಡದ ಮೌಲ್ಯ ರು.500 ಕೋಟಿಯಾಗಿದೆ. ಕೊಲ್ಕತ್ತಾ ಟೀಂನ ಸಹ ಮಾಲೀಕರಾಗಿರುವ ನಟಿ ಜೂಹಿ ಚಾವ್ಲಾ ಮತ್ತು ಆಕೆಯ ಪತಿ ಜೆ ಮೆಹ್ತಾ ಅವರೊಂದಿಗೆ ಸೇರಿ ಶಾರುಖ್ ಟ್ರಿನಿಡಾಡ್ ಆ್ಯಂಡ್ ಟ್ಯುಬಾಗೋ ತಂಡ ಖರೀದಿಸಿದ್ದಾರೆ.

ದ್ವಾಯೆನ್ ಬ್ರಾವೋ, ಡಾರೆನ್ ಬ್ರಾವೋ, ಜೊಹಾನ್ ಬೋಥಾ ಮೊದಲಾದವರು  ಟ್ರಿನಿಡಾಡ್ ಆ್ಯಂಡ್ ಟುಬಾಗೋ ತಂಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜ್ಯಾಕ್ ಕಾಲೀಸ್ ಕೂಡಾ ಶಾರುಖ್‌ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

No Comments

Leave A Comment