Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ನಕಲಿ ಡಿಗ್ರಿ ವಿವಾದ: ದೆಹಲಿ ಆಪ್ ಕಾನೂನು ಸಚಿವ ತೋಮರ್‌ ಅರೆಸ್ಟ್‌ -4 ದಿನ ಪೊಲೀಸ್ ವಶಕ್ಕೆ

1_0ನವದೆಹಲಿ: ನಕಲಿ ಪದವಿ ಪ್ರಮಾಣ ಪತ್ರ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕಾನೂನು ಸಚಿವ ಜೀತೇಂದ್ರ ಸಿಂಗ್‌ ತೋಮರ್‌ (ಸಚಿವ ತೋಮರ್ ಬಂಧನದ ಹಿಂದೆ ಕೇಂದ್ರದ ಕೈವಾಡ ಇಲ್ಲ; ಸಿಂಗ್) ಅವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ದೆಹಲಿಯ ಬಾರ್‌ ಕೌನ್ಸಿಲ್‌ ನೀಡಿದ ದೂರಿನನ್ವಯ ತೋಮರ್‌ ಅವರ ವಿರುದ್ಧ  ಸೋಮವಾರ ರಾತ್ರಿ ಎಫ್ಐಆರ್‌ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ತೋಮರ್‌ ಅವರನ್ನು ಬಂಧಿಸಿ  ಹೌಸ್‌ ಕಾಸ್‌  ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

ತೋಮರ್‌ ಅವರು ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ವಿದ್ಯಾರ್ಹತೆ ಕುರಿತು ಸಲ್ಲಿಸಿದ್ದ ಪದವಿ ಪ್ರಮಾಣ ಪತ್ರ ನಕಲಿ ಎಂಬ ವಿಷಯ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಸಿಂಗ್‌ ವಿರುದ್ದ ವಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತನಿಖೆ ನಡೆಸಲು ಆಗ್ರಹಿಸಿದ್ದವು.  ಪ್ರಕರಣ ಕುರಿತು ಸ್ಪಷ್ಟನೆ ನೀಡುವಂತೆ ಸಿಎಂ ಕೇಜ್ರಿವಾಲ್‌ ಅವರು ಸಚಿವ ಜಿತೇಂದ್ರ ಸಿಂಗ್‌ಗೆ ಸೂಚಿಸಿದ್ದರು.

ತೋಮರ್ ಬಂಧನಕ್ಕೆ ಆಪ್ ಆಕ್ರೋಶ:
ನಕಲಿ ಪದವಿ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಬಂಧಿಸಿರುವುದಕ್ಕೆ ಎಎಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಆಪ್ ಸರ್ಕಾರದ ಮೇಲೆ ಒತ್ತಡ ಹೇರಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಸೋಡಿಯಾ ಕಿಡಿ 
ದೆಹಲಿಯಲ್ಲಿ ತುರ್ತು ಪರಿಸ್ಥಿತಿಯಂಥಹ ಸ್ಥಿತಿ ನಿರ್ಮಾಣ ವಾಗಿದೆ. 30 ಕ್ಕೂ ಹೆಚ್ಚು ಪೊಲೀಸರು ಬಂದು ತೋಮರ್‌ ಅವರನ್ನು ಬಂಧಿಸುವ ಅಗತ್ಯವಿತ್ತೆ? ಅವರೇನು ಉಗ್ರಗಾಮಿಯೆ? ಎಂದು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಕಿಡಿ ಕಾರಿದ್ದಾರೆ.

ಬಂಧನ ಪ್ರಶ್ನಿಸಿದ ತೋಮರ್‌ 
ಯಾವುದೇ ನೋಟಿಸ್ ನೀಡದೆ ನನ್ನ ಬಂಧಿಸಿದ್ದಾರೆ. ಬಂಧಿಸುವ ಮುನ್ನ ಪೊಲೀಸರು ನೋಟಿಸ್ ನೀಡಬೇಕಾಗಿತ್ತು.ಕೇಂದ್ರ ಸರ್ಕಾರದ ಅಣತಿಯಂತೆ ದೆಹಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಂಧಿತ ಸಚಿವ ತೋಮರ್ ಅಸಮಾಧಾನ ಹೊರಹಾಕಿದ್ದಾರೆ.

ಯಾವುದೇ ಮೂನ್ಸೂಚನೆ ಇಲ್ಲದೆ, ನೋಟಿಸ್‌ ನೀಡದೆ ತನ್ನನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ತೋಮರ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೂತುಹಲಕ್ಕೆ ಕಾರಣವಾದ ಪೊಲೀಸರ ನಡೆ
ದೆಹಲಿ ಬಾರ್‌ ಕೌನ್ಸಿಲ್‌ ದಾಖಲು ಮಾಡಿದ್ದ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ತೋಮರ್‌ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆದು ತೀರ್ಪು ಬರುವ ಮುನ್ನವೆ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಆತುರದಲ್ಲಿ ತೋಮರ್‌ ಅವರನ್ನು ಬಂಧಿಸಿರುವ ಪೊಲೀಸರ ನಡೆ ಕುರಿತಾಗಿ ಕುತೂಹಲ ಮೂಡಿದೆ.

ಇನ್ನೊಂದೆಡೆ ತೋಮರ್‌ ಅವರ ಬಂಧನದ ಬಗ್ಗೆ ದೆಹಲಿ ಪೊಲೀಸ್‌ ಅಯುಕ್ತ ಬಸ್ಸಿ ಅವರನ್ನು ಪ್ರಶ್ನಿಸಿದಾಗ ‘ನಾನು ಬೇರೊಂದು ಸಭೆಯಲ್ಲಿದ್ದೆ, ಈ ಬಗ್ಗೆ ನನಗೆ ಇನ್ನಷ್ಟೆ ತಿಳಿದು ಬರಬೇಕಿದೆ .ಸದ್ಯ ಯಾವುದೇ ಮಾಹಿತಿಯಿಲ್ಲ’ ಎಂದಿರುವುದೂ ಅಚ್ಚರಿ ಮೂಡಿಸಿದೆ.

No Comments

Leave A Comment