Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಎಸ್ಪಿ ಶಾಸಕನ ವಿರುದ್ಧ ವರದಿ ಪೋಸ್ಟಿಂಗ್; ಪತ್ರಕರ್ತನ ಜೀವಂತ ದಹನ

journalistkilled_subhajitಶಹಜಹಾನ್ ಪುರ್: ಸಮಾಜವಾದಿ ಪಕ್ಷದ ಶಾಸಕ ರಾಮ್ ಮೂರ್ತಿ ವಿರುದ್ಧ ಫೇಸ್ ಬುಕ್ ನಲ್ಲಿ ಬರಹ ಪ್ರಕಟಿಸಿದ್ದಕ್ಕೆ ಶಹಜಹಾನ್ ಪುರ್ ಮೂಲದ ಸಾಮಾಜಿಕ ಜಾಲತಾಣದ ಪತ್ರಕರ್ತ ಜಗೇಂದ್ರ ಸಿಂಗ್ ಎಂಬವರನ್ನು ಜೀವಂತವಾಗಿ ಸುಟ್ಟು ಹಾಕಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಪತ್ರಕರ್ತ್ ಸಿಂಗ್ ಅವರಿಗೆ ಪೊಲೀಸ್ ಅಧಿಕಾರಿಯೇ ಬೆಂಕಿ ಹಚ್ಚಿರುವುದಾಗಿ ಸಿಂಗ್ ಕುಟುಂಬದವರು ಆರೋಪಿಸಿದ್ದಾರೆ. ಸಂಪೂರ್ಣವಾಗಿ ಬೆಂದು ಹೋಗಿದ್ದ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡಾ, ಆಸ್ಪತ್ರೆಗೆ ತರುವ ಮುನ್ನವೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಶಾಸಕ ರಾಮ್ ಮೂರ್ತಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ಮತ್ತು ಭೂಕಬಳಿಕೆ ವಿರುದ್ಧ ಸಿಂಗ್ ವರದಿ ಪ್ರಕಟಿಸಿದ್ದೇ ಅವರ ಪ್ರಾಣಕ್ಕೆ ಕುತ್ತಾಗಿದೆ ಎಂದು ಕುಟುಂಬದವರು ದೂರಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡರೂ ಸಹ ಇದರಿಂದ ಆಕ್ರೋಶಗೊಂಡಿದ್ದರು. ಹಾಗಾಗಿ ಅವರು ಸಿಂಗ್ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದರು.

ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರೇ ಜಗೇಂದ್ರ ಸಿಂಗ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಏತನ್ಮಧ್ಯೆ, ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜಗೇಂದ್ರ ಸಿಂಗ್ ವಿರುದ್ಧ ದೂರು ದಾಖಲಾಗಿತ್ತು. ನಾವು ಆತನನ್ನು ಬಂಧಿಸಲು ಯತ್ನಿಸಿದ್ದೇವು. ಆದರೆ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಹಜಹಾನ್ ಪುರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

No Comments

Leave A Comment