Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

18 ಕೆ.ಜಿ ಚಿನ್ನ, ಇನೋವಾ ಕಾರಿನೊಂದಿಗೆ ಚಾಲಕ ಎಸ್ಕೇಪ್

goldಕೋಲಾರ: 18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಬೆಂಗಳೂರಿನ ಓಂ ಜ್ಯುವೆಲರಿಯ ಮಾಲೀಕ ರಾಜೇಶ್ ಭಟ್ ಕಾರಿನ ಚಾಲಕ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್ ಭಟ್ ತಮ್ಮ ಇಬ್ಬರು ಸ್ನೇಹಿತರ ಜೊತೆ ಕೋಲ್ಕತ್ತಾದಿಂದ ಚಿನ್ನಾಭರಣ ಮಾಡಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವೇಳೆ ಮಧ್ಯಾಹ್ನದ ಊಟಕ್ಕೆಂದು ಕೋಲಾರ ಸಮೀಪದ ಅಡಿಗಾಸ್ ಹೋಟೆಲ್ ಬಳಿ ನಿಲ್ಲಿಸಿದ್ದರು. ಈ ವೇಳೆ ರಾಜೇಶ್‌ಭಟ್ ಮತ್ತು ಸ್ನೇಹಿತರು ಒಳಗೆ ಹೋಗಿದ್ದಾರೆ.

ಊಟ ಮಾಡಿಕೊಂಡು ರಾಜೇಶ್ ಭಟ್ ಹೊರ ಬರುವಷ್ಟರಲ್ಲಿ ಇನೋವಾ ಕಾರು, 18 ಕೆ.ಜಿ. ಚಿನ್ನಾಭರಣ, 1 ಲಕ್ಷ ನಗದು ಸಮೇತ ಕಾರಿನ ಚಾಲಕ ಬಾಬು ಪರಾರಿಯಾಗಿದ್ದಾನೆ.

ಕೂಡಲೇ ರಾಜೇಶ್ ಭಟ್ ಬಾಬುವಿಗಾಗಿ ಸುತ್ತ-ಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಫೋನ್ ಗೆ ಕರೆ ಮಾಡಿದ್ದು ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಮಾಲೀಕ ರಾಜೇಶ್ ಭಟ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲ್ಹೋರಿ ಸ್ಥಳ ಪರಿಶೀಲನೆ ನಡೆಸಿ, ಬಾಬೂವಿಗಾಗಿ ಪತ್ತೆಗಾಗಿ ತಂಡವನ್ನು ರಚಿಸಿದ್ದಾರೆ.

No Comments

Leave A Comment