Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮ್ಯಾಗಿಯಲ್ಲಿ ಹಾನಿಕಾರಕ ಅಂಶ ಇಲ್ಲ: ನೆಸ್ಲೆ

nnnnnnnnನವದೆಹಲಿ (ಪಿಟಿಐ): ‘ಮ್ಯಾಗಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳು ಇಲ್ಲ. ಆದರೆ ಅನಗತ್ಯವಾಗಿ ಗೊಂದಲ ಉಂಟಾಗಿದೆ. ಆದ ಕಾರಣ ಮಾರುಕಟ್ಟೆಯಿಂದ   ಮ್ಯಾಗಿ ಉತ್ಪನ್ನಗಳನ್ನು ವಾಪಸ್‌ ಪಡೆಯುತ್ತಿದ್ದೇವೆ’ ಎಂದು ನೆಸ್ಲೆ ಇಂಡಿಯಾ ಕಂಪೆನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೌಲ್‌ ಬಲ್ಕ್ ಶುಕ್ರವಾರ ಹೇಳಿದರು.

ಭಾರತದಲ್ಲಿ ಮ್ಯಾಗಿ ವಿವಾದದಿಂದ ಉಂಟಾಗಿರುವ ಪರಿಸ್ಥಿತಿಯ ಅವಲೋಕನ ನಡೆಸುವುದಕ್ಕಾಗಿ ಸ್ವಿಟ್ಜರ್ಲೆಂಡ್‌ನಿಂದ ಇಲ್ಲಿಗೆ ಬಂದಿರುವ ಅವರು, ವಿವಾದ ಬಗೆಹರಿಸುವುದಕ್ಕೆ ಕಂಪೆನಿಯು ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಅನಗತ್ಯ ವಿವಾದದಿಂದ ಗ್ರಾಹಕರಲ್ಲಿ ಗೊಂದಲ ಮೂಡಿದೆ.  ನಾವು ಮ್ಯಾಗಿ ತಯಾರಿಕೆಯಲ್ಲಿ ವಿಶ್ವದಾದ್ಯಂತ ಒಂದೇ ಗುಣಮಟ್ಟ ಮಾನದಂಡ  ಹಾಗೂ ವಿಧಾನವನ್ನು ಅನುಸರಿಸುತ್ತೇವೆ. ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳು ಇಲ್ಲ ಎನ್ನುವುದು ನಾವು ನಡೆಸಿರುವ ಪರೀಕ್ಷೆಗಳಿಂದ ದೃಢಪಟ್ಟಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ನೆಸ್ಲೆ ಇಂಡಿಯಾವು ತನ್ನ ಪ್ರಯೋಗಾಲಯದಲ್ಲಿ 1,000 ಹೆಚ್ಚು  ಮ್ಯಾಗಿ  ಮಾದರಿಗಳನ್ನು ಪರೀಕ್ಷಿಸಿದೆ. ಅಲ್ಲದೇ 600ಕ್ಕೂ ಹೆಚ್ಚು ಮಾದರಿಗಳನ್ನು ಹೊರಗಿನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದೆ. ಎಲ್ಲ ಫಲಿತಾಂಶಗಳಲ್ಲಿಯೂ ಮ್ಯಾಗಿ ಸಂಪೂರ್ಣ ಆರೋಗ್ಯಕರವಾಗಿದೆ ಎನ್ನುವುದು ಸಾಬೀತಾಗಿದೆ’ ಎಂದರು.

ರುಕಟ್ಟೆಯಿಂದ ಎಷ್ಟು ಪ್ರಮಾಣದಲ್ಲಿ ಮ್ಯಾಗಿಯನ್ನು ವಾಪಸ್‌ ತೆಗೆದುಕೊಳ್ಳಲಾಗಿದೆ ಮತ್ತು ಇದರಿಂದ ಭಾರತದಲ್ಲಿ ಮ್ಯಾಗಿ ಮಾರಾಟಕ್ಕೆ ಯಾವ ರೀತಿಯಲ್ಲಿ ಹೊಡೆತ ಬಿದ್ದಿದೆ ಎನ್ನುವ ಪ್ರಶ್ನೆಗೆ ಅವರು ಉತ್ತರನೀಡಲಿಲ್ಲ.

‘ ನಮ್ಮ ಮುಖ್ಯ ಉದ್ದೇಶ ಗ್ರಾಹಕರ ನಂಬಿಕೆಯನ್ನು ಗಳಿಸುವುದು’ ಎಂದಷ್ಟೇ ನುಡಿದರು. ‘ಸೀಸವು ಪರಿಸರದಲ್ಲಿ ಎಲ್ಲೆಡೆ ಇದೆ.  ಮ್ಯಾಗಿಯಲ್ಲಿ ಇದರ ಅಂಶ ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಇದೆ. ಮ್ಯಾಗಿಯಲ್ಲಿ ಅಜಿನೊಮೊಟೊ (ಮೊನೊಸೋಡಿಯಂ ಗ್ಲುಟಮೇಟ್‌)  ಅನ್ನು ಸೇರಿಸಿಲ್ಲ. ಅದು ಸಹಜವಾಗಿಯೇ ಅದರಲ್ಲಿ ಅಡಕವಾಗಿದೆ’ ಎಂದರು.

No Comments

Leave A Comment