Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಚೀನಾ ಹಡಗು ದುರಂತ: 331 ಮಂದಿ ಸಾವು

China-shipwebಬೀಜಿಂಗ್‌ (ಐಎಎನ್‌ಎಸ್‌):  ಜೂನ್‌ 1 ರಂದು ಚೀನಾದ ಯಂಗ್ಟಜೆ ನದಿಯಲ್ಲಿ ಮುಳುಗಿದ್ದ ವಿಲಾಸಿ ನೌಕೆಯಲ್ಲಿದ್ದವರಲ್ಲಿ 331 ಮಂದಿ ಮೃತಪಟ್ಟಿರುವುದಾಗಿ ಚೀನಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಖಚಿತಪಡಿಸಿದೆ.

ಈ ನೌಕೆಯಲ್ಲಿ ಒಟ್ಟು 456 ಪ್ರವಾಸಿಗರಿದ್ದರು. ಇವರಲ್ಲಿ 14 ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಇನ್ನೂ 111 ಮಂದಿಯ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ನೌಕೆಯ ಕೆಳ ಮಹಡಿಯಲ್ಲಿ ಸಿಲುಕಿದವರು ಅಲ್ಲೇ ಜೀವಂತ ಸಮಾಧಿಯಾಗಿರಬಹುದು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

3,500 ಸೈನಿಕರು, 1,700 ಅರೆ ಸೇನಾಪಡೆ ಸಿಬ್ಬಂದಿ, 149 ಬೋಟುಗಳು, 59 ಹೆಲಿಕಾಫ್ಟರ್‌ಗಳನ್ನು ಈ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಈಸ್ಟರ್ನ್‌ ಸ್ಟಾರ್ ಹೆಸರಿನ ಈ  ವಿಲಾಸಿ ನೌಕೆ 11 ದಿನಗಳ ವಿನೋದ ಯಾತ್ರೆಯಾಗಿ ಪ್ರವಾಸಿಗರನ್ನು ಕರೆದುಕೊಂಡು ಯಂಗ್ಟಜೆ ನದಿ ಮಾರ್ಗವಾಗಿ ಹೊರಟಿತ್ತು.  ಜೂನ್‌ 1 ರ ಮಧ್ಯರಾತ್ರಿ ಬೀಸಿದ ಬಿರುಗಾಳಿಗೆ ಸಿಲುಕಿ ನೀರಿನಲ್ಲಿ ಮುಳುಗಿತ್ತು.

No Comments

Leave A Comment