Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ರಾಜ್ಯಪಾಲರ ರಾಜಭವನ ವೈಭೋಗಕ್ಕೆ ₨ 4 ಕೋಟಿ ಖರ್ಚು

Rajbhavanಬೆಂಗಳೂರು: ರಾಜ್ಯಪಾಲರ ನಿವಾಸ ಮತ್ತು ಕಚೇರಿ ಹೊಂದಿರುವ ರಾಜಭವನದ ನವೀಕರಣಕ್ಕೆ 2014–15ನೇ ಸಾಲಿನಲ್ಲಿ ಬರೋಬ್ಬರಿ ₨ 4 ಕೋಟಿ ವೆಚ್ಚ ಮಾಡಲಾಗಿದೆ.

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಲೋಕೋಪಯೋಗಿ ಇಲಾಖೆ ನೀಡಿರುವ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ರಾಜಭವನ ಆವರಣದ ಕಟ್ಟಡಗಳ ಸುಧಾರಣೆಗಾಗಿ ರಾಜ್ಯಪಾಲರ ಕಾರ್ಯದರ್ಶಿಯವರು 2014 ಜೂನ್‌  17ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಮೂರು ಕೋಟಿ ವೆಚ್ಚದ ಏಳು ಸಿವಿಲ್‌ ಕಾಮಗಾರಿಗಳಿಗೆ ಈ ವರ್ಷದ ಜನವರಿ 5 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಇದರ ಜೊತೆಗೆ ಒಂದು ಕೋಟಿ ವೆಚ್ಚದಲ್ಲಿ 18 ವಿದ್ಯುತ್‌ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಇವಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಕಾಯ್ದೆ–1999 ಕಲಂ 4 (ಜಿ) ಅಡಿಯಲ್ಲಿ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯ್ತಿ ಕೂಡ ನೀಡಲಾಗಿದೆ.

15 ಲಕ್ಷದ ಟಿವಿ: ರಾಜ್ಯಪಾಲರ  ಉಪಯೋಗಕ್ಕಾಗಿ 15 ಲಕ್ಷದ ಎಲ್‌ಜಿ ಆಲ್ಟ್ರಾ ಎಚ್‌ಡಿ 3ಡಿ ಟಿವಿ‌ಖರೀದಿಸಲಾಗಿದೆ.

ವಾಲಾ ಯಾನಕ್ಕೆ 1 ಕೋಟಿ!
ರಾಜ್ಯಪಾಲ ವಜುಭಾಯಿ ವಾಲಾ ಅವರು 2014ರ ಸೆಪ್ಟೆಂಬರ್‌1 ರಂದು  ಅಧಿಕಾರ ವಹಿಸಿಕೊಂಡ ದಿನದಿಂದ  2015 ಮೇ 13ರವರೆಗೆ ವಿಮಾನ ಮತ್ತು ಹೆಲಿಕಾಪ್ಟರ್‌ನಲ್ಲಿ ಮಾಡಿದ ಪ್ರಯಾಣಕ್ಕೆ ಸರ್ಕಾರ ₨ 1.3 ಕೋಟಿ ವೆಚ್ಚ ಮಾಡಿದೆ!

ಒಂಬತ್ತು ತಿಂಗಳ ಅವಧಿಯಲ್ಲಿ ವಾಲಾ ಅವರು ಬರೋಬ್ಬರಿ 54.44 ಗಂಟೆ ಆಗಸದಲ್ಲಿ ಹಾರಾಡಿದ್ದಾರೆ. ಇವುಗಳಲ್ಲಿ ಬಹುತೇಕ ಪ್ರಯಾಣಗಳನ್ನು ವಿಶೇಷ ವಿಮಾನ ಮತ್ತು ಬಾಡಿಗೆ ಹೆಲಿಕಾಪ್ಟರ್‌ಗಳಲ್ಲಿ  ಮಾಡಿದ್ದಾರೆ. ಹೆಲಿಕಾಪ್ಟರ್‌ ಪ್ರಯಾಣ ವೆಚ್ಚ ₨29.9 ಲಕ್ಷ ವಾಗಿದ್ದರೆ, ವಿಮಾನ ಪ್ರಯಾಣದ ವೆಚ್ಚ ₨1.09 ಕೋಟಿ ಆಗಿದೆ.

ಇದರಲ್ಲಿ ರಾಜ್ಯಪಾಲರು ತಮ್ಮ  ತವರು ರಾಜ್ಯ ಗುಜರಾತ್‌ನ ವಡೋದರಾ, ಸೂರತ್‌, ಅಹಮದಾಬಾದ್‌ಗೆ ನೀಡಿದ ಭೇಟಿಯ ಖರ್ಚುಗಳೂ ಸೇರಿವೆ.

ಮಹೇಶ್‌ ಚೇವರ್‌ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಈ ಮಾಹಿತಿ ಪಡೆದುಕೊಂಡಿದ್ದಾರೆ.
ರಾಜಭವನದ ಸುತ್ತ –ಮುತ್ತ: ರಾಜಭವನ ಇರುವ ಪ್ರದೇಶದ ವಿಸ್ತೀರ್ಣ 18 ಎಕರೆ. 61 ಸಿಬ್ಬಂದಿ ವಸತಿ ಗೃಹಗಳಿವೆ. 300ಕ್ಕೂ ಅಧಿಕ ಹೆಚ್ಚು ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸುತ್ತದೆ.

No Comments

Leave A Comment