Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕೊಂಕಣ ರೈಲ್ವೆ ನಾಗರಿಕರ ಬೇಡಿಕೆಗೆ ಸ್ಪಂದನೆ ‘ಸ್ವಯಂಚಾಲಿತ ಮೆಟ್ಟಿಲು’

UDUPIWEBಉಡುಪಿ: ನಗರದ ಇಂದ್ರಾಳಿ ರೈಲು ನಿಲ್ದಾಣಕ್ಕೆ ಇನ್ನು ನಾಲ್ಕು ತಿಂಗಳಲ್ಲಿ ಸ್ವಯಂ ಚಾಲಿತ ಮೆಟ್ಟಿಲುಗಳನ್ನು ಅಳವ ಡಿಸಲಾಗುತ್ತದೆ. ಬೇರೆ ನಿಲ್ದಾಣಗಳಿಗೆ ಹೋಲಿಸಿದರೆ ಎತ್ತರದ ಪ್ರದೇಶದ ಲ್ಲಿರುವ ಉಡುಪಿ ರೈಲು ನಿಲ್ದಾಣಕ್ಕೆ ಸ್ವಯಂ ಚಾಲಿತ ಮೆಟ್ಟಿಲುಗಳು ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಪ್ರಯಾಣಿಕರ ಅದರಲ್ಲೂ ಹಿರಿಯ ನಾಗರಿಕರ ಬೇಡಿಕೆಗೆ ಕೊಂಕಣ ರೈಲ್ವೆ ಕೊನೆಗೂ ಸ್ಪಂದಿಸಿದೆ.

ರೈಲ್ವೆ ಪ್ರಯಾಣಿಕರು ಹಾಗೂ ಗ್ರಾಹ ಕರ ಸೌಲಭ್ಯ ಪಾಕ್ಷಿಕದ ಕುರಿತು ಮಾಹಿತಿ ನೀಡಲು ಮಂಗಳವಾರ ಕರೆ ದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಬಿಂದು ಮುರಳೀಧರನ್‌ ಈ ವಿಷಯ ತಿಳಿಸಿದರು. ಉಡುಪಿ ನಿಲ್ದಾಣದ ಫ್ಲಾಟ್‌ಪಾರಂ ಅನ್ನು ಎರಡೂ ಕಡೆಯಿಂದಲೂ ವಿಸ್ತರಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಜೈವಿಕ ಟಾಯ್ಲೆಟ್‌ ನಿರ್ಮಿಸಲಾಗುತ್ತದೆ. ಬೈಂದೂರು ರೈಲು ನಿಲ್ದಾಣವನ್ನು ಸಮಗ್ರ ವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಫ್ಲಾಟ್‌ ಫಾರಂ ಅನ್ನು ಪೂರ್ವದಿಂದ ಪಶ್ಚಿಮಕ್ಕೆ ವರ್ಗಾಯಿಸಲಾಗುತ್ತದೆ. ಫ್ಲಾಟ್‌ ಫಾರಂ ಶೆಲ್ಟರ್‌ಗಳನ್ನೂ ನಿರ್ಮಾಣ ಮಾಡಲಾಗು ವುದು. ಅಲ್ಲದೆ ಜೈವಿಕ ಶೌಚಾಲಯವನ್ನೂ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ರೈಲ್ವೆ ಭದ್ರತಾ ಸಿಬ್ಬಂದಿ  (ಆರ್‌ಪಿಎಫ್‌) ನಿಲ್ದಾಣಗಳು ಹಾಗೂ ರೈಲುಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡುವರು. ಇದನ್ನು ಅಭಿಯಾನದ ರೀತಿ ಮಾಡಲಾಗುತ್ತದೆ. ಉಡುಪಿ– ತೋಕೂರು, ರೋಹ– ಕರಂ ಜಾಡಿ ಮಾರ್ಗ ಸೇರಿದಂತೆ ಕೆಲವು ಮಾರ್ಗಗಳನ್ನು ದ್ವಿಪಥಗೊಳಿಸುವ ಹಾಗೂ ವಿದ್ಯುದೀಕರಣ ಮಾಡುವ ಯೋಚನೆ ಸಹ ಇದೆ. ರೈಲ್ವೆ ಸಚಿವರು ಮಾರ್ಗಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವರು ಎಂದರು.

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಗಳ ಜೊತೆಗೂಡಿ ರೈಲಿನಲ್ಲಿ ಪ್ರವಾಸ ಕೈಗೊಳ್ಳುವವರಿಗೆ ಅನುಕೂಲ ಮಾಡಿಕೊ ಡುವ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿ ನೀಡಲಾ ಗುತ್ತದೆ. ಅಲ್ಲದೆ ಬಸ್‌ಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಂಡು ಪ್ರವಾಸಿ ಗರಿಗೆ ಸೇವೆ ನೀಡಲಾಗುವುದು ಎಂದರು.

ಇಲಾಖೆಯ ಹಿರಿಯ ಅಧಿಕಾರಿಗಳು ರೈಲ್ವೆ ನಿಲ್ದಾಣ ಹಾಗೂ ಚಲಿಸುವ ರೈಲುಗಳಲ್ಲಿ ಗ್ರಾಹಕರೊಂದಿಗೆ ಸಂವಾದ ನಡೆಸುವರು. ಗ್ರಾಹಕರಿಂದ ಬರುವ ದೂರುಗಳಿಗೆ ಪರಿಹಾರ ಒದಗಿಸಲಾ ಗುತ್ತದೆ. ಅಲ್ಲದೆ ಸೇವೆಯನ್ನು ಉತ್ತಮ ಪಡಿಸಲಾಗುತ್ತದೆ. ಟಿಕೆಟ್‌ ರಹಿತ ಪ್ರಯಾಣದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. 2013–14ನೇ ಸಾಲಿನಲ್ಲಿ ಟಿಕೆಟ್‌ರಹಿತ ಪ್ರಯಾಣಿಕರಿಂದ ₨ 9.7 ಕೋಟಿ ದಂಡ ವಸೂಲಿ ಮಾಡ ಲಾಗಿತ್ತು, ಈ ಮೊತ್ತ 2014–15ಕ್ಕೆ 11.48 ಕೋಟಿಯಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ  ಸುಧಾ ಕೃಷ್ಣಮೂರ್ತಿ ಇದ್ದರು.

No Comments

Leave A Comment