Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಚೀನಾದಲ್ಲಿ ಭೀಕರ ದುರಂತ: ಪ್ರಯಾಣಿಕ ಬೋಟ್ ಮುಳುಗಿ 450 ಮಂದಿ ಕಣ್ಮರೆ-ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ದುರಂತ

chinaಬೀಜಿಂಗ್: ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 450 ಪ್ರಯಾಣಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

“ಈಸ್ಟರ್ನ್ ಸ್ಟಾರ್” ಎಂಬ ಹೆಸರಿನ ಪ್ರಯಾಣಿಕ ಹಡಗು ಚೀನಾದ ನಾನ್ ಜಿಂಗ್ ನಿಂದ ಚಾಂಗ್ ಕಿಂಗ್ ನತ್ತ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಸಿಬ್ಬಂದಿಗಳು ಸೇರಿದಂತೆ ಸುಮಾರು 458 ಮಂದಿ ಪ್ರಯಾಣಿಕರು ಇದ್ದರು. ಯಂಗೆಟ್ಜ್ ನದಿಯಲ್ಲಿ ಉಂಟಾದ ಸುಂಟರಗಾಳಿಗೆ ಸಿಲುಕಿ ಜಿಲಾನಿ ಪ್ರದೇಶದಲ್ಲಿ ಹಡಗು ಮುಳುಗಿದೆ ಎಂದು ತಿಳಿದುಬಂದಿದೆ.

ಚೀನಾದ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿರುವಂತೆ ಹಡಗಿನಲ್ಲಿ 405 ಚೀನಿ ಪ್ರಯಾಣಿಕರು, 5 ಟ್ರಾವೆಲ್ ಸಂಸ್ಥೆಗಳಿಗೆ ಸೇರಿದ ಸಿಬ್ಬಂದಿಗಳು ಮತ್ತು 47 ಮಂದಿ ಹಡಗಿನ ಸಿಬ್ಬಂದಿಗಳು ಇದ್ದರು. ಪ್ರಯಾಣಿಕರಲ್ಲಿದವರಲ್ಲಿ ಬಹುತೇಕರು 50-80 ವರ್ಷದೊಳಗಿನ ಹಿರಿಯ ನಾಗರಿಕರಾಗಿದ್ದು, ಶಾಂಘೈ ಟೂರ್ ಗ್ರೂಪ್ ಎಂಬ ಟ್ರಾವೆಲ್ ಸಂಸ್ಥೆ ಆಯೋಜಿಸಿದ್ದ ಪ್ರವಾಸದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. uu

ಪ್ರಸ್ತುತ ಘಟನಾ ಸ್ಥಳಕ್ಕೆ ಚೀನಾದ ಭದ್ರತಾ ಪಡೆಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇನ್ನು ಹಡುಗು ದುರಂತ ವಿಚಾರ ತಿಳಿಯುತ್ತಿದ್ದಂತೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ. ಹೀಗಾಗಿ ಘಟನಾ ಸ್ಥಳದಲ್ಲಿ ಸುಮಾರು 3000 ಸಾವಿರ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, 50 ಬೋಟ್ ಗಳು ಮತ್ತು 5 ಹಡಗುಗಳನ್ನು ಎತ್ತುವ ಟಗ್ ಬೋಟ್ ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇನ್ನು ಘಟನಾ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 1 ಸಾವಿರ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.

ಈಗಾಗಲೇ “ಈಸ್ಟರ್ನ್ ಸ್ಟಾರ್” ಬೋಟ್ ನಲ್ಲಿ ಪ್ರಯಾಣಿಸುತ್ತಿದವರು ಎನ್ನಲಾದ 10 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾಕಾರ್ಯಚರಣೆಗೆ ತೊಡಕಾಗಿದ್ದು, ಯಾಂತ್ರಿಕ ಬೋಟ್ ಗಳನ್ನು ಉಪಯೋಗಿಸಿ ಮುಳುಗು ತಜ್ಞರು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದಾರೆ.

No Comments

Leave A Comment