Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಆರ್ ಬಿಐ ನಿಂದ ರೆಪೋ ದರ 0.25 ರಷ್ಟು ಕಡಿತ -ಗೃಹ, ವಾಹನ ಸಾಲ ಅಗ್ಗ, ಮರು ಪಾವತಿ ಕಂತು ಬಡ್ಡಿ ಕಡಿಮೆಯಾಗುವ ಸಾಧ್ಯತೆ

rbiನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ ಮಂಗಳವಾರ ರೆಪೋ ದರವನ್ನು0.25 ರಷ್ಟು ಕಡಿಮೆ ಮಾಡಿದ್ದು, ಗೃಹ ಸಾಲ, ವಾಹನ ಸಾಲ ಮತ್ತು ಇನ್ನಿತರ ಸಾಲದ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ.

ಇಂದು ನವದೆಹಲಿಯ ಆರ್ ಬಿಐ ಕಚೇರಿಯಲ್ಲಿ ಗವರ್ನರ್‌ ರಘುರಾಮ್‌ ರಾಜನ್‌ ಅವರು ಪ್ರಸಕ್ತ ಸಾಲಿನ 2 ನೇ ದ್ವೈಮಾಸಿಕ ಆರ್ಥಿಕ ನೀತಿಯನ್ನು ಪ್ರಕಟಿಸಿದರು. ಅಲ್ಲದೆ ತಕ್ಷಣಕ್ಕೆ ಜಾರಿಯಾಗುವಂತೆ ರೆಪೋ ದರವನ್ನು ಶೇ.7.5 ರಿಂದ 7.25 ಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಿದರು. ಆದರೆ ನಗದು ಮೀಸಲು ಪ್ರಮಾಣ(Cash Reserve Ratio-CRR)ವನ್ನು ಶೇ.4ರಷ್ಟೇ ಇರಿಸಲಾಗಿದೆ.

ಮೂರನೇ ಬಾರಿ ಆರ್ ಬಿಐ ರೆಪೋ ದರವನ್ನು ಕಡಿತಗೊಳಿಸಿದ್ದು, ಪ್ರಸಕ್ತ ವರ್ಷ ಜನವರಿ ಮತ್ತು ಮಾರ್ಚ್‌ನಲ್ಲಿ ರೆಪೋ ದರವನ್ನು 0.25 ರಷ್ಟು ಕಡಿತಗೊಳಿಸಲಾಗಿತ್ತು.

No Comments

Leave A Comment