Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಚೀನಾದ ಅಣು ಜಲಾಂತರ್ಗಾಮಿ ಭೀತಿ: ನೌಕಾಪಡೆ ಹೈಅಲರ್ಟ್

Chineseನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಅಣುಚಾಲಿತ ಜಲಾಂತರ್ಗಾಮಿಯೊಂದರ ಉಪಸ್ಥಿತಿ ಬಗ್ಗೆ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಲರ್ಟ್ ಆಗಿದೆ.

ಹೀಗೆಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ. ಸೊಮಾಲಿಯಾ ಸಮುದ್ರದಾಚೆ ಕಡಲ್ಗಳ್ಳರ ನಿಗ್ರಹಕ್ಕಾಗಿ ಸಬ್‍ಮರಿನ್ ಅನ್ನು ನಿಯೋಜಿಸಿರಬಹುದು ಎಂಬ ಊಹೆಯನ್ನು ತಳ್ಳಿಹಾಕಿರುವ ನೌಕಾಪಡೆ, ಈ ಬಗ್ಗೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದೆ. ಕಳೆದ ಕೆಲ ತಿಂಗಳುಗಳಿಂದ ಚೀನಾದ ಸಬ್‍ಮರಿನ್‍ವೊಂದು ಹಿಂದೂ ಮಹಾಸಾಗರದಲ್ಲಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಪತ್ತೆ ಮಾಡಿದಾಗ, ಭಾರತದ ಜಲಗಡಿಯ ಮೇಲೆ ಕಣ್ಣಿಡುತ್ತಿರುವ ಯಾವುದೇ ಸಬ್‍ಮರಿನ್ ಪತ್ತೆಯಾಗಿಲ್ಲ.

ಆದರೆ, ಶೀತಲ ಸಮರದ ಸಂದರ್ಭದಂತೆ ಈಗಲೂ ಯಾವುದೋ ದೊಡ್ಡ ಜಲಾಂತರ್ಗಾಮಿ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನವಿದೆ. ಈ ಹೊಸ ಸಬ್‍ಮರಿನ್ ಕಪಟ ಆಟದಲ್ಲಿ ಚೀನಾದ ಹೊಸ ವಿಧದ 093 ಶಾಂಗ್ ದರ್ಜೆಯ ತ್ವರಿತ ದಾಳಿಯ ಅಣು ಸಬ್ ಮರಿನ್ ಪ್ರಮುಖ ಪಾತ್ರ ವಹಿಸಿರಬಹುದು. ಇಂತಹ ಕನಿಷ್ಠ 6 ಸಬ್‍ಮರಿನ್‍ಗಳನ್ನು ಚೀನಾ ಅಭಿವೃದ್ಧಿಪಡಿಸಿರಬಹುದು ಅಥವಾ ನಿಯೋಜಿಸಿರಲೂಬಹುದು ಎಂದೂ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment