Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜೂನ್ 15ರಿಂದ ರೋಮಿಂಗ್ ಶುಲ್ಕ ತೆಗೆದುಹಾಕಿದ ಬಿ ಎಸ್ ಎನ್ ಎಲ್

BSNLನವದೆಹಲಿ: ಕೇಂದ್ರ ಸರ್ಕಾರ ಒಡೆತನದ ದೂರ ಸಂಪರ್ಕ ಸಂಸ್ಥೆ ಬಿ ಎಸ್ ಎನ್ ಎಲ್ ಜೂನ್ ೧೫ ರಿಂದ ಉಚಿತ ರೋಮಿಂಗ್ ಸೇವೆಗಳನ್ನು ಒದಗಿಸಲಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.

“ದೇಶದಾದ್ಯಂತ ಜೂನ್ ೧೫ ರಿಂದ ಬಿ ಎಸ್ ಎನ್ ಎಲ್ ರೋಮಿಂಗ್ ಉಚಿತವಾಗಿರುತ್ತದೆ” ಎಂದು ಪ್ರಸಾದ್ ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಬಿ ಎಸ್ ಎನ್ ಎಲ್ ಸ್ಥಿರ ದೂರವಾಣಿಯಿಂದ ದೇಶದ ಯಾವುದೇ ಭಾಗಕ್ಕೆ ಮೊಬೈಲ್ ಗಳನ್ನು ಒಳಗೊಂಡಂತೆ ಯಾವುದೇ ಆಪರೇಟರ್ ಆಗಲೀ ರಾತ್ರಿ ೯ ಘಂಟೆಯಿಂದ ಬೆಳಗ್ಗೆ 7 ಘಂಟೆಯವರೆಗೆ ಉಚಿತ ದೂರವಾಣಿ ಕರೆಗಳ ಕೊಡುಗೆಯನ್ನು ಕೂಡ ನೀಡಿತ್ತು. ಇದು ಮೇ ೧ ರಿಂದ ಚಾಲ್ತಿಯಲ್ಲಿದೆ.

ಬಹಳಷ್ಟು ನಷ್ಟ ಅನುಭವಿಸುತ್ತಿದ್ದರು ಸ್ಥಿರ ದೂರವಾಣಿ ಮಾರುಕಟ್ಟೆಯಲ್ಲಿ ಬಿ ಎಸ್ ಎನ್ ಎಲ್ ೬೨.೨೬% ಮಾರುಕಟ್ಟೆ ಪ್ರಮಾಣವನ್ನು ಹೊಂದಿದೆ.

No Comments

Leave A Comment