Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕಾರು ಢಿಕ್ಕಿ: ನಿವೃತ್ತ ಡಿವೈಎಸ್‌ಪಿ ಸಾವು

B.J.-Bhandaryಉಡುಪಿ: ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜಿನ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಡಿವೈಎಸ್‌ಪಿ ಮಂಗಳೂರು ಪಡೀಲ್‌ ನಿವಾಸಿ ಬೆಳ್ತಂಗಡಿ ಜಯ ಭಂಡಾರಿ (ಬಿ.ಜೆ. ಭಂಡಾರಿ – 66) ಮೃತಪಟ್ಟಿದ್ದಾರೆ.

ರಸ್ತೆ ದಾಟುವ ಸಲುವಾಗಿ ಬದಿಯಲ್ಲಿ ನಿಂತಿದ್ದಾಗ ಉಡುಪಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫ‌ಲಿಸದೆ ಅವರು ಮೃತಪಟ್ಟರು.

ಅವರು ಪತ್ನಿ ಮಂಗಳೂರು ಕಾರ್ಪೊರೇಶನ್‌ ಬ್ಯಾಂಕ್‌ ಉದ್ಯೋಗಿ ಪ್ರಫ‌ುಲ್ಲಾ ಜೆ. ಭಂಡಾರಿ, ಮಗ ಉತ್ತರ ಪ್ರದೇಶದಲ್ಲಿ ಭೂಸೇನೆಯ ವೈದ್ಯ ಡಾ| ರೋಹನ್‌ ಮತ್ತು ಮಗಳು ಕಾರ್ಪೊರೇಶನ್‌ ಬ್ಯಾಂಕ್‌ ಬೆಂಗಳೂರು ಇಂದಿರಾನಗರ ಶಾಖೆಯ ಅಧಿಕಾರಿ ರೋಶನಿ ಅವರನ್ನು ಅಗಲಿದ್ದಾರೆ.

ಬಿ.ಜೆ. ಭಂಡಾರಿ ಅವರ ಸಂಬಂಧಿಕರ ಮದುವೆ ರವಿವಾರ ಉಡುಪಿಯಲ್ಲಿ ನಡೆದಿದ್ದು, ಮದುವೆಗೆ ಹೋಗಲು ಆಗದಿದ್ದ ಕಾರಣ ಸೋಮವಾರ ಬ್ರಹ್ಮಾವರದಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಸ್‌ಎಂಎಸ್‌ ಕಾಲೇಜು ಬಳಿಯ ಹೊಟೇಲೊಂದರಲ್ಲಿ ಊಟ ಮುಗಿಸಿ ಹೆದ್ದಾರಿ ದಾಟಲು ನಿಂತಿದ್ದಾಗ ಕಾರು ಢಿಕ್ಕಿ ಹೊಡೆದಿತ್ತು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಂತ್ರಿ ಚಿನ್ನದ ಪದಕ ಪಡೆದಿದ್ದರು…
ಧೂಮ ಭಂಡಾರಿ-ಕಮಲಾ ದಂಪತಿಯ ಐದನೇ ಮಗನಾದ ಅವರು ಪ್ರಾಥಮಿಕ ಮತ್ತು ಜೂನಿಯರ್‌ ಕಾಲೇಜು ಶಿಕ್ಷಣ ಬೆಳ್ತಂಗಡಿಯಲ್ಲಿ, ಪದವಿ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಪಡೆದಿದ್ದರು. ಎಸ್‌ಐ ಆಗಿ ಪೊಲೀಸ್‌ ಸೇವೆಗೆ ಸೇಪೇಡೆಗೊಂಡಿದ್ದ ಅವರು ಪದೋನ್ನತಿಗೊಂಡು ಇನ್ಸ್‌ಪೆಕ್ಟರ್‌, ಡಿವೆಎಸ್‌ಪಿ/ಎಸಿಪಿಯಾಗಿ ನಿವೃತ್ತರಾಗಿದ್ದರು. ಉತ್ತಮ ಕರ್ತವ್ಯಕ್ಕೆ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರು, ದ.ಕ. ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಸ್ಥಾಪಕರಾಗಿದ್ದ ಅವರು ಪ್ರಸ್ತುತ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಸಂತಾಪ ಸೂಚಿಸಿದ್ದಾರೆ.

No Comments

Leave A Comment