Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಗಂಡು ಮಗು ಹೆರದ ಪತ್ನಿ, ಮೂವರು ಹೆಣ್ಣುಮಕ್ಕಳ ದಹಿಸಿದ ಪಾಪಿ ಪತಿ

harassmentಕೋಲ್ಕತಾ: ಗಂಡು ಮಗು ಹೆರಲಿಲ್ಲ ಎಂಬ ಒಂದೇ ಕಾರಣಕ್ಕೆ ಪತ್ನಿ ಮೇಲೆ ಕುಪಿತನಾದ ಕ್ರೂರಿ ಪತಿಯೊಬ್ಬ ತನ್ನ ಪತ್ನಿ ಮತ್ತು ಮೂವರ ಹೆಣ್ಣುಮಕ್ಕಳನ್ನು ಸಜೀವವಾಗಿ ದಹಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಮುರ್ಷಿದಬಾದ್ ನಲ್ಲಿ ಈ ವಿದ್ರಾವಕ ಘಟನೆ ನಡೆದಿದ್ದು, ಸತತ 3 ಹೆಣ್ಣುಮಕ್ಕಳನ್ನು ಹೆತ್ತ ತನ್ನ ಪತ್ನಿ ವಿರುದ್ಧ ಆಕ್ರೋಶಗೊಂಡಿದ್ದ ಪಾಪಿ ಪತಿ ಭಾನುವಾರ ರಾತ್ರಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾನೆ. ಅಲ್ಲದೆ ಪುಟ್ಟ ಮಕ್ಕಳೆಂದೂ ನೋಡದೆ ತನ್ನದೇ ಮೂವರು ಹೆಣ್ಣುಮಕ್ಕಳನ್ನು ಕೂಡ ಸುಟ್ಟು ಹಾಕಿದ್ದಾನೆ. ಮುರ್ಷಿದಬಾದ್ ನ ಕಂಡಿಯಲ್ಲಿ ಈ ಘಟನೆ ಸಂಭವಿಸಿದ್ದು 30 ವರ್ಷದ ಉಸ್ತಾಕ್ ಅಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಮದುವೆಯಾದಾಗಿನಿಂದಲೂ ಉಸ್ತಾಕ್ ಅಲಿ ಗಂಡುಮಗು ಬೇಕು ಎಂದು ಹಪಹಪಿಸುತ್ತಿದ್ದ. ಆದರೆ ಸತತ ಮೂರು ಹೆಣ್ಣುಮಕ್ಕಳು ಜನಿಸಿದ್ದರಿಂದ ಆತ ತನ್ನ ಹೆಂಡತಿಯ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ. ಇದೇ ವಿಚಾರವಾಗಿ ಆಗಾಗ ಹೆಂಡತಿ ಮತ್ತು ಮಕ್ಕಳನ್ನು ಮನಸೋ ಇಚ್ಛೆ ಬಡಿಯುತ್ತಿದ್ದ. ಆದರೆ ನಿನ್ನೆ ರಾತ್ರಿ ಜಗಳ ತಾರಕಕ್ಕೇರಿ ಉಸ್ತಾಕ್ ಅಲಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಸುಟ್ಟು ಹಾಕಿದ್ದಾನೆ. ಮೃತ ಮಕ್ಕಳ ವಯಸ್ಸನ್ನು 5,3 ಮತ್ತು 1 ವರ್ಷ ಎಂದು ಗುರುತಿಸಲಾಗಿದೆ.

No Comments

Leave A Comment