Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಡಾ| ರಾಮನಾರಾಯಣ್‌ ಮಣಿಪಾಲ ವಿ.ವಿ. ಉಪಾಧ್ಯಕ್ಷ

Ramnarayanಉಡುಪಿ: ಮಣಿಪಾಲ ವಿ.ವಿ. ಕುಲಪತಿಯಾಗಿ ಐದು ವರ್ಷ ಪೂರೈಸಿರುವ ಡಾ| ಕೆ. ರಾಮನಾರಾಯಣ್‌ ವಿ.ವಿ. ಶಿಕ್ಷಕರ ಅಭಿವೃದ್ಧಿ, ಪ್ರಾಕ್ತನ ವಿದ್ಯಾರ್ಥಿಗಳ ವ್ಯವಹಾರದ ಉಪಾಧ್ಯಕ್ಷರಾಗಿ ಜೂ. 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಹುದ್ದೆಯಲ್ಲಿ ಅವರು ಶಿಕ್ಷಕರ ಸಶಕ್ತೀಕರಣ ಮತ್ತು ಅಭಿವೃದ್ಧಿ ಚಟುವಟಿಕೆಗಳ ಕುರಿತು ಕಾರ್ಯ ನಿರ್ವಹಿಸಲಿದ್ದಾರೆ. ವಿ.ವಿ.ಯ ವಿವಿಧ ಸಂಸ್ಥೆಗಳ ಪ್ರಾಕ್ತನ ವಿದ್ಯಾರ್ಥಿಗಳ ಚಟುವಟಿಕೆಗಳ ಕುರಿತೂ ಗಮನ ಹರಿಸಲಿದ್ದಾರೆ. ಇದರ ಜೊತೆಗೆ ಮಲೆಕಾ ಮಣಿಪಾಲ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ.

ಡಾ| ರಾಮನಾರಾಯಣ್‌ ಕುಲಪತಿ ಹುದ್ದೆ ಅಲಂಕರಿಸಿದ ವೇಳೆ ಶೈಕ್ಷಣಿಕ ಪ್ರಕ್ರಿಯೆಗಳನ್ನು ಸಶಕ್ತೀಕರಣಗೊಳಿಸಲು ಗಮನಹರಿಸಿದ್ದರು. ಭವಿಷ್ಯದ ನಾಯಕರನ್ನು ರೂಪಿಸಲು ಸೆ¾„ಲ್‌ (ಸಿನರ್ಜಿಕ್‌ ಮಣಿಪಾಲ್‌ ಇಂಟೆಗ್ರೇಟೆಡ್‌ ಲೀಡರ್‌ಶಿಪ್‌ ಎಂಗೇಜೆ¾ಂಟ್‌) ಕಾರ್ಯಕ್ರಮ ರೂಪಿಸಿದ್ದರು.

ಮಣಿಪಾಲ್‌ ಎಜುಕೇಶನ್‌ ಸಿಸ್ಟಮ್‌ ವೈಸ್‌ ಚಾನ್ಸೆಲರ್ ಕೌನ್ಸಿಲ್‌ ಪ್ರಥಮ ಸಭಾಪತಿಯಾಗಿ ಅಂತರ್‌ ಕಾಲೇಜು ಸಂವಾದದ ವೇದಿಕೆಗೆ ಆದ್ಯತೆ ನೀಡಿದ್ದರು. ಎಂಯು-ಫೇಮರ್‌ ಲೀಡರ್‌ಶಿಪ್‌ ಇಂಟರ್‌ನೆàಶನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟರ್‌ಪ್ರೊಫೆಶನಲ್‌ ಎಜುಕೇಶನ್‌, ಮಣಿಪಾಲ್‌ ಸೆಂಟರ್‌ ಫಾರ್‌ ಪ್ರೊಫೆಶನಲ್‌ ಆ್ಯಂಡ್‌ ಪರ್ಸನಲ್‌ ಡೆವೆಲಪ್‌ಮೆಂಟ್‌ನಂತಹ ಸಂಘಟನೆಗಳನ್ನು ಸ್ಥಾಪಿಸಿದ್ದರು. ಮಣಿಪಾಲ್‌ ಸಮೂಹದ ಜೈಪುರ, ಸಿಕ್ಕಿಂ, ಮಲೇಕಾ, ದುಬೈ ಕ್ಯಾಂಪಸ್‌ಗಳಲ್ಲಿ ಪರಿಣಾಮಕಾರಿಯಾದ ಕಾರ್ಯಾಗಾರಗಳನ್ನು ಸಂಘಟಿಸಿದ್ದರು.

ಡಾ| ಟಿಎಂಎ ಪೈ ದತ್ತಿ ಪೀಠಗಳನ್ನು, ವಿ.ವಿ. ಪೂರ್ಣಕಾಲೀನ ಪಿಎಚ್‌ಡಿ ವಿದ್ಯಾರ್ಥಿವೇತನವೇ ಮೊದಲಾದವುಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮತ್ತು ಸಂಶೋಧನೆಗೆ ಡಾ| ರಾಮನಾರಾಯಣ್‌ ಒತ್ತು ನೀಡಿದ್ದರು. ಸೆಂಟರ್‌ ಆಫ್ ಎಕ್ಸೆಲೆನ್ಸ್‌ ಇನ್‌ ಫಿಲಾಸಫಿ ಆ್ಯಂಡ್‌ ಹ್ಯುಮ್ಯಾನಿಟೀಸ್‌ ಆ್ಯಂಡ್‌ ನೇಚುರಲ್‌ ಸೈನ್ಸಸ್‌, ಸಂಶೋಧನ ನಿರ್ದೇಶನಾಲಯದ ಆರಂಭ, ಮಣಿಪಾಲದ ಅನಾಟಮಿ ಮತ್ತು ಪೆಥಾಲಜಿ ವಸ್ತುಸಂಗ್ರಹಾಲಯದ ನವೀಕರಣಕ್ಕೆ ಅವರು ಆದ್ಯತೆ ನೀಡಿದ್ದರು. ಮಣಿಪಾಲ ವಿ.ವಿ.ಗೆ ಬ್ರಿಕ್ಸ್‌ ದೇಶಗಳಲ್ಲಿ 85ನೆಯ, ಏಶ್ಯಾದಲ್ಲಿ 186ನೆಯ, ಭಾರತದಲ್ಲಿ ಪ್ರಥಮ ಖಾಸಗಿ ಡೀಮ್ಡ್ ವಿ.ವಿ. ಸ್ಥಾನ ದೊರಕಿರುವುದರ ಹಿಂದೆ ಇವರ ಕೊಡುಗೆ ಅಪಾರವಾಗಿದೆ.

No Comments

Leave A Comment