Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ವೇಸ್ಟ್ ಕಂಪ್ಯೂಟರ್ ಗೆ ಸಿಕ್ಕಿತು ರು.1.27 ಕೋಟಿ

Apple_I_Computerಮಿಲಿಪಿಟಾಸ್: ಒಬ್ಬರಿಗೆ ಬೇಡವಾದದ್ದು ಮತ್ತೊಬ್ಬರ ಪಾಲಿಗೆ ಚಿನ್ನದಮೊಟ್ಟೆಯಾದ ಪ್ರಕರಣವಿದು!

ಹೌದು, ಎಲೆಕ್ಟ್ರಾನಿಕ್ ವೇಸ್ಟ್ ಎಂದು ರೀಸೈಕಲ್ ಕಂಪನಿಯೊಂದಕ್ಕೆ ಮಹಿಳೆಯೊಬ್ಬಳು ಕೊಟ್ಟುಹೋಗಿದ್ದ ಕಂಪ್ಯೂಟರ್ ಈಗ ರು.1.27 ಕೋಟಿಗೆ ಮಾರಾಟವಾಗಿದೆ. ಗಂಡ ತೀರಿಕೊಂಡ ಬಳಿಕ ಗ್ಯಾರೇಜ್ ಕ್ಲೀನ್ ಮಾಡುವ ವೇಳೆ ಮಹಿಳೆ ಕಣ್ಣಿಗೆ ಈ ಕಂಪ್ಯೂಟರ್ ಬಿದ್ದಿತ್ತು. ಹಳೆಯ ಎಲೆಕ್ಟ್ರಾನಿಕ್ ವಸ್ತುವಾಗಿದ್ದ ಕಾರಣ ಆಕೆ ಅದನ್ನು ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ ಸಿಲಿಕಾನ್ ವ್ಯಾಲಿಯ ರೀಸೈಕಲ್ ಕಂಪನಿಯೊಂದಕ್ಕೆ ಕೊಟ್ಟುಹೋಗಿದ್ದಳು.

ರೀಸೈಕಲಿಂಗ್ ಸಂಸ್ಥೆ ಕೆಲಸಗಾರರು ವಾರದ ನಂತರ ಆ ಬಾಕ್ಸ್ ತೆರೆದಾಗ ಅಚ್ಚರಿ ಕಾದಿತ್ತು. ಯಾಕೆಂದರೆ ಆ ಬಾಕ್ಸ್ ನಲ್ಲಿದ್ದುದು ಅಪರೂಪದ ಆ್ಯಪಲ್- ಐ ಕಂಪ್ಯೂಟರ್! ಇದೊಂದು ಫಸ್ಟ್ ಜನರೇಷನ್ ಕಂಪ್ಯೂಟರ್ ಆಗಿದ್ದು, ಇಂಥ 200 ಡೆಸ್ಕ್ ಟಾಪ್‍ಗಳಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದವು. ಈ ಕಂಪ್ಯೂಟರ್ ಅನ್ನು ಆ್ಯಪಲ್ ಸಂಸ್ಥೆಯ ಮಾಜಿ ಸಿಇಒ ಸ್ಟೀವ್ ಜಾಬ್ಸ್, ಸ್ಟೇವ್ ವೊಝಾನಿಯಕ್ ಮತ್ತು ರಾನ್ ವೈನ್ 1976ರಲ್ಲಿ ರಚಿಸಿದ್ದ ಕಂಪ್ಯೂಟರ್ ಇದು.

ಈ ಅಪರೂಪದ ಕಂಪ್ಯೂಟರ್ ಅನ್ನು ರೀಸೈಕಲಿಂಗ್ ಕಂಪನಿಯ ಮಾಲಿಕ ರು.1.27 ಕೋಟಿಗೆ ಮಾರಾಟ ಮಾಡಿದ್ದಾರೆ. ಸಾಮಾನ್ಯವಾಗಿ ಕಂಪನಿ ಈ ರೀತಿಯಾಗಿ ವಸ್ತುಗಳನ್ನು ಮಾರಾಟ ಮಾಡಿದ ಹಣದಲ್ಲಿ ಶೇ.50ರಷ್ಟನ್ನು ಅದರ ಮೂಲ ಮಾಲೀಕರಿಗೆ ನೀಡುತ್ತದೆ. ಆದರೆ, ಈ ಮಹಿಳೆ ತನ್ನ ವಿಳಾಸ ಬಿಟ್ಟುಹೋಗಿಲ್ಲ. ಹಾಗಾಗಿ ಆಕೆಯ ಪತ್ತೆಗಾಗಿ ಈಗ ಕಂಪನಿ ಹುಡುಕಾಟ ಆರಂಭಿಸಿದೆ.

No Comments

Leave A Comment