Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ರವಿ ಪೂಜಾರಿ ಇಂದ ಬೆದರಿಕೆ ಕರೆ

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ದೊರೆ ರವಿ ಪೂಜಾರಿ ಇಂದ ಸೋಮವಾರದಂದು ಬೆದರಿಕೆ ಕರೆ ಬಂದಿದ್ದು, ಸುಮಾರು 10 ಕೋಟಿ ರೂಪಾಯಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ಮೂರು ದಿನದ ಗಡುವು ನೀಡಿದ್ದಾನೆ.ಹಾಲಾಡಿ ಶ್ರೀನಿವಾಸ ಶೆಟ್ಟಿಸೋಮವಾರದಂದು ಬ್ಯಾಂಕಾಕ್ನಿಂದ ಶಾಸಕರಿಗೆ ಕರೆ ಬಂದಿದ್ದು, ತುಳುವಿನಲ್ಲಿ ಸಂಭಾಷಣೆ ಪ್ರಾರಂಭಿಸಿದ ಆತ ತಾನು ರವಿ ಪೂಜಾರಿ ಎಂದು ತಿಳಿಸಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಪ್ರತಿಯಾಗಿ ಕರೆಗೆ ಉತ್ತರಿಸಿದ ಹಾಲಾಡಿಯವರು ತನ್ನ ಆಸ್ತಿಯನ್ನು ಪೂರ್ಣವಾಗಿ ಮಾರಾಟ ಮಾಡಿದರು ಅಷ್ಟು ಮೊತ್ತ ಹೊಂದಿಸಲು ಸಾಧ್ಯವಿಲ್ಲ ಎಂದಾಗ, ಮೂರು ದಿನದ ಒಳಗೆ ಹಣ ಸಂದಾಯವಾಗದಿದ್ದರೆ ಜೀವಕ್ಕೆ ಹಾನಿ ಮಾಡುವುದಾಗಿ ತಿಳಿಸಿದ್ದಾನೆ. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಗೆ ಮಾಹಿತಿ ನೀಡಿದ್ದು, ನಮ್ಮ ಮನೆಗೆ ಭೇಟಿ ನೀಡಿದ ಅಣ್ಣಾಮಲೈ ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಸ್ಥಳೀಯ ಶಂಕರನಾರಾಯಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದು, ಕರೆಯ ಸತ್ಯಾ ಸತ್ಯತೆ ಬಗ್ಗೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment