Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಗ್ರಾಪಂ ಚುನಾವಣೆ: ಉಡುಪಿ: 4ನೆ ದಿನ 298 ನಾಮಪತ್ರ ಸಲ್ಲಿಕೆ

ಉಡುಪಿ, ಮೇ 14: ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸುವ ನಾಲ್ಕನೆ ದಿನವಾದ ಇಂದು ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ಒಟ್ಟು 298 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಮೂಲಕ ನಾಲ್ಕು ದಿನಗಳಲ್ಲಿ ಒಟ್ಟು 462 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

 ಇಂದು 95 ಮಂದಿ ಮಹಿಳಾ ಮೀಸಲಾತಿ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದರೆ ಉಳಿದ 203 ಸಾಮಾನ್ಯ ಸ್ಥಾನಕ್ಕೆ ಸಲ್ಲಿಕೆಯಾಗಿವೆ. ಇದರಿಂದ ನಾಲ್ಕು ದಿನಗಳಲ್ಲಿ 330 ಸಾಮಾನ್ಯ ಹಾಗೂ 132 ಮಹಿಳೆಯರು ನಾಮಪತ್ರ ಸಲ್ಲಿಸಿ ದಂತಾಗಿದೆ.

ಇಂದು ಎಸ್‌ಸಿಯಿಂದ 15, ಎಸ್‌ಟಿಯಿಂದ 10, ಹಿಂದುಳಿದ ವರ್ಗ ‘ಅ’ದಿಂದ 46, ಹಿಂದುಳಿದ ವರ್ಗ ‘ಬ’ದಿಂದ 12(6+6) ನಾಮಪತ್ರಗಳನ್ನು ಸಲ್ಲಿಕೆಯಾಗಿವೆ. ಸಾಮಾನ್ಯ ಕ್ಷೇತ್ರದಲ್ಲಿ ಕುಂದಾಪುರ ತಾಲೂಕಿನಲ್ಲಿ 157, ಉಡುಪಿ ತಾಲೂಕಿನಲ್ಲಿ 108 ಹಾಗೂ ಕಾರ್ಕಳ ತಾಲೂಕಿನಲ್ಲಿ 33 ಸೇರಿದಂತೆ ಒಟ್ಟು 298 ನಾಮಪತ್ರ ಸಲ್ಲಿಕೆಯಾಗಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 462 ನಾಮಪತ್ರ ಸಲ್ಲಿಕೆಯಾಗಿವೆ.

No Comments

Leave A Comment