Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮ್ಯಾಡ್ರಿಡ್‌ ಓಪನ್‌: ಕ್ವಿಟೋವಾಗೆ ಪ್ರಶಸ್ತಿ

ಮ್ಯಾಡ್ರಿಡ್‌: ಏಕಮುಖವಾಗಿ ಸಾಗಿದ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಕೂಟದ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾ ಅವರು ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

2011ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಜೆಕ್‌ ಗಣರಾಜ್ಯದ ನಾಲ್ಕನೇ ಶ್ರೇಯಾಂಕದ ಕ್ವಿಟೋವಾ ತನ್ನ ಶಕ್ತಿಶಾಲಿ ಗ್ರೌಂಡ್‌ ಹೊಡೆತಗಳಿಂದ ಕುಜ್ನೆತ್ಸೋವಾ ಅವರನ್ನು 6-1, 6-2 ಸೆಟ್‌ಗಳಿಂದ ಉರುಳಿಸಿದರು.

ತೊಡೆ ನೋವಿನಿಂದ ಬಳಲುತ್ತಿದ್ದ ಕುಜ್ನೆತ್ಸೋವಾ ಮೊದಲ ಸೆಟ್‌ ಸೋತ ಬಳಿಕ ವೈದ್ಯಕೀಯ ವಿಶ್ರಾಂತಿ ಪಡೆದಿದ್ದರು. ಎಡ ತೊಡೆಗೆ ಬ್ಯಾಂಡೇಜ್‌ ಕಟ್ಟಿ ಆಡಲಿಳಿದ ಕುಜ್ನೆತ್ಸೋವಾ ಅವರನ್ನು ಒಂದು ತಾಸಿನ ಒಳಗಾಗಿ ಕ್ವಿಟೋವಾ ಕೆಡಹಿದರು. ಕ್ವಿಟೋವಾ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್‌ ವನ್‌ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿದ್ದರು.

ಇದೊಂದು ನನ್ನ ಪಾಲಿಗೆ ಅವಿಸ್ಮರಣೀಯ ವಾರ ಮತ್ತು ಈ ಸುಂದರವಾದ ಅಂಗಣದಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದಿರುವುದು ಬಹಳಷ್ಟು ಸಂತೋಷವಾಗಿದೆ ಎಂದು ಕ್ವಿಟೋವಾ ತಿಳಿಸಿದರು.

ಆಯಾಸದಿಂದಾಗಿ ಈ ವರ್ಷದ ಇಂಡಿಯನ್‌ ವೆಲ್ಸ್‌ ಮತ್ತು ಮಿಯಾಮಿ ನಡೆದ ಟೆನಿಸ್‌ ಕೂಟದಿಂದ ಹಿಂದೆ ಸರಿದಿದ್ದ ಕ್ವಿಟೋವಾ ಕಳೆದ ತಿ,ಗಳು ಸ್ಟಟ್‌ಗರ್ಟ್‌ನಲ್ಲಿ ನಡೆದ ಒಳಾಂಗಣ ಆವೇ ಅಂಗಣದ ಟೆನಿಸ್‌ ಕೂಟದ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದರು.

ಮ್ಯಾಡ್ರಿಡ್‌ ಪ್ರಶಸ್ತಿ ಕ್ವಿಟೋವಾ ಅವರ ಬಾಳ್ವೆಯ 16ನೇ ಪ್ರಶಸ್ತಿಯಾಗಿದೆ. ಈ ಸಾಧನೆಯಿಂದ ಅವರು ನೂತನ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿಯಲಿದ್ದಾರೆ.

No Comments

Leave A Comment