Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉದ್ಯಾವರ : ಮದುವೆ ಹಾಲ್‌ ಮುಂಭಾಗ ಇರಿಸಿದ್ದ ಕಾರಿನಿಂದ ನಗ-ನಗದು ಕಳವು

ಕಾಪು : ಮದುವೆ ಹಾಲ್‌ನ ಮುಂಭಾಗದ ಪಾರ್ಕಿಂಗ್‌ ಏರಿಯಾದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಮುರಿದು ಒಳ‌ಗಿನಿಂದ ಭಾರೀ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ನ್ನು ಕದ್ದೊಯ್ದ ಘಟನೆ ರವಿವಾರ ಉದ್ಯಾವದಲ್ಲಿ ನಡೆದಿದೆ.

ಉದ್ಯಾವರ ಹಲೀಮಾ ಸಾಬು ಸಭಾಭವನದಲ್ಲಿ ರವಿವಾರ ನಡೆಯುತ್ತಲಿದ್ದ ವಿವಾಹ ಸಮಾರಂಭಕ್ಕೆ ಬಂದಿದ್ದ ವಧುವಿನ ಕಡೆಯವರು ಇರಿಸಿದ್ದ ಮಾರುತಿ ರಿಟ್ಜ್ ಕಾರಿನೊಳಗಿನಿಂದ ಸೊತ್ತುಗಳು ಕಳವಾಗಿದ್ದು, ಘಟನೆಯಿಂದಾಗಿ ವಧುವಿನ ಕಡೆಯವರು ಕಂಗಾಲಾಗಿ ಬಿಟ್ಟಿದ್ದಾರೆ.

ಕಾರಿನೊಳಗಿನಿಂದ ಚಿನ್ನದ ಕಿವಿಯೋಲೆ ಸೆಟ್‌, ಉಂಗುರ, ಮೊಬೈಲ್‌ ಹ್ಯಾಂಡ್‌ಸೆಟ್‌ ಮತ್ತು 5 ಸಾವಿರ ರೂಪಾಯಿ ನಗದು ಕಾಣೆಯಾಗಿದ್ದು, ಅದರ ಜೊತೆಗೆ ಎ.ಟಿ.ಎಂ ಕಾರ್ಡ್‌, ಪಾನ್‌ ಕಾರ್ಡ್‌ ಸಹಿತ ವಿವಿಧ ದಾಖಲೆ ಪತ್ರಗಳನ್ನು ಕದ್ದೊಯ್ಯಲಾಗಿದೆ.

ಟೈಟ್‌ ಸೆಕ್ಯುರಿಟಿ ಇದ್ದರೂ ಘಟನೆ ನಡೆಯಿತು ! : ರಾ. ಹೆ. 66ರಕ್ಕೆ ತಾಗಿಕೊಂಡಂತಿರುವ ಉದ್ಯಾವರ ಹಲೀಮಾ ಸಾಬುj ಸಭಾಭವನದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು ಕರ್ತವ್ಯ ನಿರತರಾಗಿರುವಾಗಲೇ ಈ ರೀತಿಯ ಘಟನೆ ನಡೆದಿರುವುದು ಭಾರೀ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹಾಲ್‌ನ ಬದಿಯಲ್ಲಿ ರಾತ್ರಿ ವೇಳೆ ಯಾವುದೇ ವಾಹನ ನಿಂತರೂ ಓಡಿ ಬರುವ ಸೆಕ್ಯುರಿಟಿಗಳು ಹಗಲು ಹೊತ್ತಿನಲ್ಲಿ ಮೈಮರೆತು ಡ್ನೂಟಿ ಮಾಡಿದ್ದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡು ತಿಂಗಳ ಹಿಂದೆಯೂ ಇಂತದ್ದೇ ಘಟನೆ ನಡೆದಿತ್ತು : ಉದ್ಯಾವರ ಹಲೀಮಾ ಸಾಬುj ಸಭಾಭವನದಲ್ಲಿ ಎರಡು ತಿಂಗಳ ಹಿಂದೆಯೂ ಇಂತದ್ದೇ ಒಂದು ಘಟನೆ ನಡೆದಿದ್ದು, ಮದುವೆ ಪಾರ್ಟಿಯ ಮಹಿಳೆಯ ಮೈಮೇಲಿಂದ ಚಿನ್ನಾಭರಣ ಸೆಳೆಯುತ್ತಿದ್ದಂತೆಯೇ ತಮಿಳುನಾಡು ಮೂಲದ ಮಹಿಳೆಯೋರ್ವರನ್ನು ಮದುವೆ ಕಡೆಯವರು ಪತ್ತೆ ಹಚ್ಚಿ, ಪೊಲೀಸರಿಗೆ ಒಪ್ಪಿಸಿದ್ದರು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೂಂದು ಘಟನೆ ನಡೆದು ಹೋಗಿದೆ. ಇಷ್ಟಾದರೂ ಕೂಡಾ ಹಾಲ್‌ನವರಿಗೆ ಕಳ್ಳರ ಬಗ್ಗೆ ಭಯ ಮೂಡದೇ ಇರುವುದು ಮದುವೆ ಮಾಡಿಸುವವರಲ್ಲಿ ಆತಂಕವನ್ನು ಮೂಡಿಸಿದೆ.

ಘಟನಾ ಸ್ಥಳಕ್ಕೆ ಕಾಪು  ಲಕ್ಷ್ಮಣ್‌, ಕಟಪಾಡಿ ಎ.ಎಸ್‌.ಐ ಪುರುಷೋತ್ತಮ್‌ ಮತ್ತು ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment